ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು ಯಶವಂತಪುರದಿಂದ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಬೆಂಗಳೂರು (ಜ.29): ಕಂಬಳ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಹೋರಾಟ ಈಗ ಅಧಿಕೃತವಾಗಿ ಫ್ರೀಡಂ ಪಾರ್ಕ್ ತಲುಪಿದೆ.
ನಾಳೆ ಹೈಕೋರ್ಟ್ ಕಂಬಳ ಆಚರಣೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ, ಕರಾವಳಿ ಮಿತ್ರ ಮಂಡಳಿ ಸಂಘಟನೆಯವರು ಇಂದು ಯಶವಂತಪುರದಿಂದ ಬೃಹತ್ ಬೈಕ್ ರ್ಯಾಲಿ ನಡೆಸಿದರು.
300ಕ್ಕೂ ಹೆಚ್ಚು ಬೈಕ್’ಗಳ ಮೂಲಕ ಹೊರಟ ರ್ಯಾಲಿಯಲ್ಲಿ, 600ಕ್ಕೂ ಹೆಚ್ಚು ಜನ ಭಾಗವಹಿಸಿ ಕಂಬಳ ಕಾಪಾಡಿ ಎಂದು ಘೋಷಣೆ ಕೂಗಿದರು.
ಮಲ್ಲೇಶ್ವರಂ, ಆನಂದರಾವ್ ಸರ್ಕಲ್ ಮೂಲಕ ಸಾಗಿದ ಈ ಬೈಕ್ ರ್ಯಾಲಿ, ಫ್ರೀಡಂ ಪಾರ್ಕ್ ತಲುಪಿತು. ಇನ್ನು ಕರಾವಳಿ ಮಿತ್ರ ಮಂಡಳಿ ಅಧ್ಯಕ್ಷರಾದ ಸೌಂದರ್ಯ ರಮೇಶ್ ಮಾತನಾಡಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರ ಅನಿಮತಿ ನೀಡಿದೆ. ಆದ್ದರಿಂದ ಕರ್ನಾಟಕದಲ್ಲೂ ಕಂಬಳ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಬೇಕು ಎಂದರು.
ಒಂದು ವೇಳೆ ಕೋರ್ಟ್ ನಾಳೆ ಅನುಮತಿ ನೀಡದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.