ನಿನ್ನೆ ಬೆಳಗ್ಗೆ ಸಿಟಿ ಸಿವಿಲ್​ ಕೋರ್ಟ್​​​ನ ಮೆಟ್ರೋ ಪ್ರವೇಶ ದ್ವಾರದಲ್ಲಿ ನಿಂತಿದ್ದ ಎಸ್ಕಿಲೇಟರ್​ ಮೇಲೆ ಹೋಗಬೇಡಿ ಎಂದಿದ್ದಕ್ಕೆ  ಮೆಟ್ರೋ ಸಿಬ್ಬಂದಿಗಳು ಹಾಗೂ ಪೊಲೀಸರ ನಡುವೆ ಜಗಳವೇರ್ಪಟ್ಟಿತ್ತು.

ಬೆಂಗಳೂರು(ಜು.07): ನಿನ್ನೆ ಬೆಳಗ್ಗೆ ಸಿಟಿ ಸಿವಿಲ್​ ಕೋರ್ಟ್​​​ನ ಮೆಟ್ರೋ ಪ್ರವೇಶ ದ್ವಾರದಲ್ಲಿ ನಿಂತಿದ್ದ ಎಸ್ಕಿಲೇಟರ್​ ಮೇಲೆ ಹೋಗಬೇಡಿ ಎಂದಿದ್ದಕ್ಕೆ ಮೆಟ್ರೋ ಸಿಬ್ಬಂದಿಗಳು ಹಾಗೂ ಪೊಲೀಸರ ನಡುವೆ ಜಗಳವೇರ್ಪಟ್ಟಿತ್ತು.

ಈ ಮಾರಾಮಾರಿಯಲ್ಲಿ ಭಾಗಿಯಾಗಿದ್ದ ಆರು ಜನ ಮೆಟ್ರೋ ಸಿಬ್ಬಂದಿಯನ್ನ ಆಲಸೂರು ಗೇಟ್ ಪೊಲೀಸಲು ಬಂದಿಸಿದ್ದಾರೆ. ಇದನ್ನ ವಿರೋದಿಸಿ ಬಿಎಂಆರ್‌ಡಿಸಿ ಸಿಬ್ಬಂದಿಗಳು ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಧರಣಿ ಮಾಡಿದ್ದು, ಬಂಧಿಸಿರುವ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವವರೆಗೆ ನಾವು ಯಾರು ಕೆಲಸ ಮಾಡಲ್ಲ ಅಂತಾ ಪಟ್ಟುಹಿಡಿದು ಕುಳಿತಿದ್ದಾರೆ. ಆರೆ ಮೆಟ್ರೋ ಎಂಡಿ ಪ್ರತಿಭಟನೆ ಕೈಬಿಡುವಂತೆ ಸಿಬ್ಬಂದಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ

ಸುಮಾರು 5೦೦ಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಇದೇ ಮೊಟ್ಟ ಮೊದಲ ಬಾರಿಗೆ ಪ್ರತಿಭಟನೆಯಿಂದ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಬ್ದವಾಗಿದೆ.

ಇನ್ನು ಮೆಟ್ರೋ ಸಿಬ್ಬಂದಿಗಳು ಯಾವುದೇ ​ಹೇಳಿಕೆ ನೀಡದೆ ಏಕಾಏಕಿ ಸಂಚಾರ ಸ್ಥಗಿತಗೊಳಿಸಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.