ಪೌರಕಾರ್ಮಿಕರ ಸಮಸ್ಯೆ ಇಂದು ನಿನ್ನೆಯದ್ದಲ್ಲ ಈ ಕುರಿತಾಗಿ ಹಲವಾರು ವರದಿಗಳು ಪ್ರಕಟವಾಗಿವೆ. ಆದರೀಗ ಇದರ ಬೆನ್ನಲ್ಲೇ ಮಹಿಳಾ ಪೌರಕಾರ್ಮಿಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವೂ ಕೇಳಿ ಬಂದಿದೆ. ದೂರು ನೀಡಿದರೂ ಬಿಬಿಎಂಪಿ ಇನ್ನೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪೌರ ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕ ಸಂಘವು ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಗೆ ರಾಜ್ಯಸಭಾ ಸದಸ್ಯರಾಜೀವ್ ಚಂದ್ರಶೇಖರ್ ತಮ್ಮ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರು(ಅ.24): ಪೌರಕಾರ್ಮಿಕರ ಸಮಸ್ಯೆ ಇಂದು ನಿನ್ನೆಯದ್ದಲ್ಲ ಈ ಕುರಿತಾಗಿ ಹಲವಾರು ವರದಿಗಳು ಪ್ರಕಟವಾಗಿವೆ. ಆದರೀಗ ಇದರ ಬೆನ್ನಲ್ಲೇ ಮಹಿಳಾ ಪೌರಕಾರ್ಮಿಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವೂ ಕೇಳಿ ಬಂದಿದೆ. ದೂರು ನೀಡಿದರೂ ಬಿಬಿಎಂಪಿ ಇನ್ನೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪೌರ ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕ ಸಂಘವು ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಗೆ ರಾಜ್ಯಸಭಾ ಸದಸ್ಯರಾಜೀವ್ ಚಂದ್ರಶೇಖರ್ ತಮ್ಮ ಬೆಂಬಲ ಸೂಚಿಸಿದ್ದಾರೆ.
ಕೆಆರ್ ಪುರಂನಲ್ಲಿ ಬಿಬಿಎಂಪಿ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ದಲಿತ ಮಹಿಳೆಯೊಬ್ಬಳು ತನಗೆ ನೀಡಬೇಕಾದ ಸಂಬಳದ ಕುರಿತಾಗಿ ಧ್ವನಿ ಎತ್ತಿದ್ದ ಕಾರಣಕ್ಕೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಕುರಿತಾಗಿ ಅಕ್ಟೋಬರ್ 13ರಂದು ಬಿಬಿಎಂಪಿಯ ಲೈಂಗಿಕ ದೌರ್ಜನ್ಯ ಸಮಿತಿಗೆ ದೂರು ನೀಡಲಾಗಿತ್ತು. ಹೀಗಿದ್ದರೂ ಬಿಬಿಎಂಪಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಅಕ್ಟೋಬರ್ 19ರಂದು ಕಾಂಟ್ರಾಕ್ಟರ್'ಗಳು ದೂರುದಾರರ ಮೇಲೆ ಕಬ್ಬಿಣದ ರಾಡ್'ಗಳಿಂದ ಹಲ್ಲೆ ನಡೆಸಿ, ಅತ್ಯಾಚಾರ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಪೌರ ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ, ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕ ಸಂಘವು ನಾಳೆ(ಅಕ್ಟೋಬರ್ 25ರಂದು), ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.

