ಉಡುಪಿಯಲ್ಲಿ ಇಂದು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದ ನೂತನ ಹೆರಿಗೆ ಆಸ್ಪತ್ರೆ ಉದ್ಘಾಟನೆಯಾಗಲಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದು, ಸರ್ಕಾರದ ಈ ನೂತನ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಉಡುಪಿ: ಉಡುಪಿಯಲ್ಲಿ ಇಂದು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದ ನೂತನ ಹೆರಿಗೆ ಆಸ್ಪತ್ರೆ ಉದ್ಘಾಟನೆಯಾಗಲಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದು, ಸರ್ಕಾರದ ಈ ನೂತನ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ಆಸ್ಪತ್ರೆ ಉಳಿಸಿ ಎಂಬ ಆಶಯದಲ್ಲಿ ಕೆಲ ಪ್ರಜ್ಞಾವಂತ ನಾಗರಿಕರು ಸಿಎಂ ಭೇಟಿ ಹಾಗೂ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ದುಬೈನ ಉದ್ಯಮಿ ಬಿ.ಆರ್,ಶೆಟ್ಟಿ ಅವರಿಗೆ ಸರ್ಕಾರಿ ಆಸ್ಪತ್ರೆಯ ಭೂಮಿಯನ್ನು ಕೊಟ್ಟು ಅಲ್ಲಿ ಖಾಸಗಿ ಸ್ವಾಮ್ಯದ ಎರಡು ಆಸ್ಪತ್ರೆ ಆರಂಭಿಸಲಾಗುತ್ತಿದೆ. ಆಸ್ಪತ್ರೆಗಳ ಖಾಸಗೀಕರಣವನ್ನು ವಿರೋಧಿಸುವ ಸರ್ಕಾರ ಇಲ್ಲಿ ತಾನೇ ಮುಂದೆ ನಿಂತು ಸರ್ಕಾರಿ ಭೂಮಿ ಮತ್ತು ಆಸ್ಪತ್ರೆಯನ್ನು ಖಾಸಗಿ ವ್ಯಕ್ತಿಯ ಕೈಗೆ ನೀಡಿರೋದು ಚರ್ಚೆಗೆ ಗ್ರಾಸವಾಗಿದೆ.
ಹಾಗಾಗಿ ಅಜ್ಜರಕಾಡು ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಸೇರಿದ ನಾಗರಿಕರು ಹೋರಾಟ ನಡೆಸಿದ್ದಾರೆ. ಬಿ.ಆರ್. ಶೆಟ್ಟಿ ನಿರ್ಮಿಸಿದ ಹೆರಿಗೆ ಆಸ್ಪತ್ರೆಯನ್ನು ಸರ್ಕಾರ ಸಂಪೂರ್ಣ ಸ್ವಾಮ್ಯಕ್ಕೆ ಪಡೆಯಬೇಕು ಎಂಬುವುದು ಪ್ರತಿಭಟನಾಕಾರರ ಆಗ್ರಹವಾಗಿದೆ.
