ವಿವಾದಗಳಿಂದಲೇ ಸುದ್ದಿಯಾಗಿರುವ ಪದ್ಮಾವತಿ ಚಿತ್ರ ಪ್ರದರ್ಶನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರತ್​ ಹಾಗೂ ಮುಂಬೈನಲ್ಲಿ ಚಿತ್ರ ಪದರ್ಶನ ತಡೆಗೆ ಆಗ್ರಹಿಸಿ ಸಂಘ ಪರಿವಾರ,ಕರಿಣಿ ಸೇನಾ, ರಜಪೂತ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನವದೆಹಲಿ (ನ.12): ವಿವಾದಗಳಿಂದಲೇ ಸುದ್ದಿಯಾಗಿರುವ ಪದ್ಮಾವತಿ ಚಿತ್ರ ಪ್ರದರ್ಶನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರತ್​ ಹಾಗೂ ಮುಂಬೈನಲ್ಲಿ ಚಿತ್ರ ಪದರ್ಶನ ತಡೆಗೆ ಆಗ್ರಹಿಸಿ ಸಂಘ ಪರಿವಾರ,ಕರಿಣಿ ಸೇನಾ, ರಜಪೂತ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿತ್ರದಲ್ಲಿ ರಜಪೂತರ ಭಾವನೆಗಳಿಗೆ ತರುವ ಅಂಶಗಳಿವೆ. ಹೀಗಾಗಿ ಚಿತ್ರ ಪದರ್ಶನ ತಡೆಯಬೇಕು ಎಂದು ಒತ್ತಾಯಿಸಿದರು. ಈ ನಡುವೆ ರಾಣಿ ಪದ್ಮಾವತಿ ವಂಶಸ್ಥರಿಂದ ಪ್ರಧಾನಿ ಪತ್ರ ಬರೆದು ಚಿತ್ರ ಪದರ್ಶನ ತಡೆಯುವಂತೆ ಮನವಿ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ನಿರ್ದೇಶಕ ಬನ್ಸಾಲಿ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.