ಬೆಳಗ್ಗಿನಿಂದ ರಾಮಚಂದ್ರಾಪುರ ಮಠದಲ್ಲಿ ಕನ್ಯಾ ಸಂಸ್ಕಾರ ನಡೀತಿದ್ದು, ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ಯಾ ಸಂಸ್ಕಾರ ಕಾರ್ಯಕ್ರಮ ವಿರೋಧಿಸಿ ದಲಿತ ಸಂಘಟನೆಗಳು, ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಮುತ್ತಿಗೆ ಯತ್ನ ನಡೆಸಿದರು.
ರಾಘವೇಶ್ವರ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳು, ವಂದೇ ಗೋಮಾತರಂ ಘೋಷಣೆ ಕೂಗಿದರು. ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪವಿದೆ. ಇಂತವರು ಹೆಣ್ಣು ಮಕ್ಕಳಿಗೆ ಕನ್ಯಾಸಂಸ್ಕಾರ ಮಾಡುವುದು ಎಷ್ಟು ಸರಿ ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗಿನಿಂದ ರಾಮಚಂದ್ರಾಪುರ ಮಠದಲ್ಲಿ ಕನ್ಯಾ ಸಂಸ್ಕಾರ ನಡೀತಿದ್ದು, ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಆನೇಕಲ್ ಸೇರಿದಂತೆ ಬೇರೆ ಭಾಗಗಳಿಂದ ಬಂದ ಪ್ರತಿಭಟನಾಕಾರರು ರಾಘವೇಶ್ವರ ಶ್ರೀಗಳ ವಿರುದ್ಧ ಘೋಷಣೆ ಕೂಗಿದರು.
