Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆ ಖಾಸಗಿಯವರಿಗೆ ನೀಡಿದ್ದಕ್ಕೆ ಸಾರ್ವಜನಿಕರಿಂದ ಪ್ರತಿಭಟನೆ

ಬಿ.ಆರ್. ಶೆಟ್ಟಿ, ಉಡುಪಿ ಮೂಲದ ದುಬೈ ಉದ್ಯಮಿ. ಬಹುಕೋಟಿ ಒಡೆಯ. ಕೃಷ್ಣನನಗರಿಯ  ಸರ್ಕಾರಿ  ಆಸ್ಪತ್ರೆಯನ್ನು ಸರ್ಕಾರ ಇವರಿಗೆ ಕೃಷ್ಣಾರ್ಪಣ ಮಾಡಲು ಹೊರಟಿದೆ. ಉಡುಪಿಯ ಹೆರಿಗೆ ಆಸ್ಪತ್ರೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಆಸ್ಪತ್ರೆಗೆ ಭೂಮಿಯನ್ನು ಕೊಟ್ಟವರು ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬ್ರು. ಕೇವಲ ಸೇವಾ ಉದ್ದೇಶಕ್ಕೆ ಮಾತ್ರ ಈ ಭೂಮಿ ಬಳಸಬೇಕು ಎಂದು ನೀಡಿದ್ದ 3.88 ಎಕರೆ ಭೂಮಿಯನ್ನು ಬಿ.ಆರ್.ಶೆಟ್ಟರಿಗೆ ನೀಡಲಾಗ್ತಿದೆ.

Protest against Govt Hospital privatization

ಉಪೇಂದ್ರರ ಸೂಪರ್ ಸಿನಿಮಾ ನೋಡಿದೋರಿಗೆ ಒಂದು ದೃಶ್ಯ ನೆನಪಿರಬಹುದು, ಮುಖ್ಯಮಂತ್ರಿಯಾಗಿ ರಾಜ್ಯವನ್ನೇ ಖಾಸಗಿಯವ್ರಿಗೆ ಮಾರಾಟ ಮಾಡೋ ಸನ್ನಿವೇಶ ಅದು. ಉಡುಪಿಯಲ್ಲೂ ಅದೇ ಆಗ್ತಿದೆ. ರಾಜ್ಯ ಮಾರದಿದ್ರೂ, ಅತ್ಯಂತ ವ್ಯವಸ್ಥಿತ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನೇ ಖಾಸಗಿಯವರಿಗೆ ನೀಡಲು ಸರ್ಕಾರ ಸಿದ್ದತೆ ನಡೆಸಿದೆ. ಸ್ವತ: ಮುಖ್ಯಮಂತ್ರಿಗಳೇ ಮುಂದಿನ ಭಾನುವಾರ ಈ ಖಾಸಗೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಬಿ.ಆರ್. ಶೆಟ್ಟಿ, ಉಡುಪಿ ಮೂಲದ ದುಬೈ ಉದ್ಯಮಿ. ಬಹುಕೋಟಿ ಒಡೆಯ. ಕೃಷ್ಣನನಗರಿಯ  ಸರ್ಕಾರಿ  ಆಸ್ಪತ್ರೆಯನ್ನು ಸರ್ಕಾರ ಇವರಿಗೆ ಕೃಷ್ಣಾರ್ಪಣ ಮಾಡಲು ಹೊರಟಿದೆ. ಉಡುಪಿಯ ಹೆರಿಗೆ ಆಸ್ಪತ್ರೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಆಸ್ಪತ್ರೆಗೆ ಭೂಮಿಯನ್ನು ಕೊಟ್ಟವರು ದಿವಂಗತ ಹಾಜಿ ಅಬ್ದುಲ್ಲಾ ಸಾಹೇಬ್ರು. ಕೇವಲ ಸೇವಾ ಉದ್ದೇಶಕ್ಕೆ ಮಾತ್ರ ಈ ಭೂಮಿ ಬಳಸಬೇಕು ಎಂದು ನೀಡಿದ್ದ 3.88 ಎಕರೆ ಭೂಮಿಯನ್ನು ಬಿ.ಆರ್.ಶೆಟ್ಟರಿಗೆ ನೀಡಲಾಗ್ತಿದೆ. ಭೂಮಿಯ ಹಕ್ಕು ಸರ್ಕಾರದ ಬಳಿಯಿದ್ದರೂ 30 ವರ್ಷ ಲೀಸ್ ಗೆ ಶೆಟ್ಟಿಯವರು ಈ ಭೂಮಿಯನ್ನು ಬಳಸಿಕೊಳ್ಳಬಹುದು. ಈ ರೀತಿಯಲ್ಲಿ ಬಿ.ಆರ್.ಶೆಟ್ಟಿ ಹಾಗೂ ಸರ್ಕಾರದ ನಡುವೆ MOU  ನಡೆದಿದೆ. ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ವ್ಯಕ್ತಿಗಳಿಗೆ ಈ ರೀತಿ ದಾನ ಮಾಡೋದು ರಾಜ್ಯದಲ್ಲೇ ಮೊದಲು. ಆದ್ರೆ ಇದಕ್ಕೆ ಸಾರ್ವಜನಿಕರಿಂದ ಕೆಲ ಆಕ್ಷೇಪಗಳು ವ್ಯಕ್ತವಾಗಿವೆ.

ಆದರೆ ಸರ್ಕಾರ ತನ್ನ ಸಮರ್ಥನೆಗೆ ಅನೇಕ ಅಂಶಗಳನ್ನು ಹೊಂದಿದೆ. ಇಲ್ಲಿ ಎರಡು ಆಸ್ಪತ್ರೆ ನಿರ್ಮಾಣ ಆಗುತ್ತೆ, ಸದ್ಯ 70 ಹಾಸಿಗೆಗಳ ಸರ್ಕಾರಿ ಹೆರಿಗೆ ಆಸ್ಪತ್ರೆ ಇದ್ದು ಅದನ್ನು 200 ಬೆಡ್ ಗೆ ಹೆಚ್ಚಿಸಲಾಗುತ್ತೆ. ಸದ್ಯ ಇರುವ ಉಚಿತ ವ್ಯವಸ್ಥೆ ಮುಂದುವರಿಯುತ್ತೆ. ಪಕ್ಕದಲ್ಲೇ ಇನ್ನೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದೆ. ಅಗತ್ಯ ಬಿದ್ದರೆ ಅಲ್ಲಿನ ಸೇವೆಯನ್ನೂ ಅರ್ಹ ಬಡರೋಗಿಗಳು ಬಳಸಿಕೊಳ್ಳಬಹುದು. 400 ಬೆಡ್ ನ ಈ ಜೆನರಲ್ ಆಸ್ಪತ್ರೆಗೆ ಶುಲ್ಕ ನೀಡಬೇಕಾಗ್ತದೆ. ಎರಡೂ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ನೇತೃತ್ವದ ಮೇಲ್ವಿಚಾರಣಾ ಸಮಿತಿ ಇರುತ್ತೆ. ಯಾವುದೇ ಕ್ಷಣದಲ್ಲಿ ಈ ಒಪ್ಪಂದವನ್ನು ವಾಪಾಸು ಪಡೆಯುವ ಅಧಿಕಾರ ಸರ್ಕಾಋಕ್ಕಿದೆ. ಭೂಮಿಯ ಮೇಲಿನ ಹಕ್ಕು ಸರ್ಕಾರದ ಬಳಿಯೇ ಇರುತ್ತೆ ಎಂದು ಉಸ್ತುವಾರಿ ಸಚಿವರು ಹೇಳುತ್ತಾರೆ.

ಜನ ವಿರೋಧದ ನಡುವೆಯೂ ಮುಂದಿನ ಭಾನುವಾರ ಸಿಎಂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದಿನ 18 ತಿಂಗಳಲ್ಲಿ ಮೊದಲಾಗಿ ಚಾರಿಟಿ ಆಸ್ಪತ್ರೆ ನಿರ್ಮಿಸಿ ಮತ್ತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ಯೋಜನೆಯಲ್ಲಿ ಸರ್ಕಾರದ ಮೇಲೆ ಯಾವುದೇ ಹಣಕಾಸಿನ ಹೊಣೆ ಇರಲ್ಲ.

ವರದಿ: ಶಶಿಧರ್​ ಮಾಸ್ತಿಬೈಲು, ಉಡುಪಿ, ಸುವರ್ಣನ್ಯೂಸ್​

Follow Us:
Download App:
  • android
  • ios