ಮುಂಬೈ(ಅ.25): ಮುಂಬೈ ಜಾಹೀರಾತು ವಲಯದ ಪ್ರಮುಖ ನಟಿ ಕಮ್ ಮಾಡೆಲ್ ಒಬ್ಬರನ್ನ ಪೊಲೀಸರು ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿಸಿದ್ಧಾರೆ. ಪುಣೆಯ ಫೈವ್ ಸ್ಟಾರ್ ಹೋಟೆಲಿನಲ್ಲಿ ಈಕೆಯನ್ನ ಬಂಧಿಸಲಾಗಿದ್ದು, ಹಲವು ಜುವೆಲರಿ ಬ್ರಾಂಡ್`ಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭೋಪಾಲ್ ಮೂಲದ ಮಾಡೆಲ್ ಆಗಿದ್ದು, ಮುಂಬೈನಲ್ಲಿ ವೃತ್ತಿಯಲ್ಲಿ ತೊಡಗಿದ್ದರು. ಕೃಷ್ಣ ಎಂಬಾತ ಈ ರಾಕೆಟ್ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಹೋಟೆಲಿನ 309ನೇ ರೂಮಿನಲ್ಲಿ ದಂಧೆ ನಡೆಯುತ್ತಿದ್ದಾಗ ರೇಡ್ ನಡೆದಿದೆ. ಪಿಂಪ್ ಕೃಷ್ಣ ಒಂದು ಸರ್ವಿಸ್`ಗೆ 50 ಸಾವಿರ ಪಡೆಯುತ್ತಿದ್ದ ಎನ್ನಲಾಗಿದೆ. ಬಂಧನದ ಬಳಿಕ ಮಾಡೆಲ್ ಅನ್ನ ಮನೋಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ಆಕೆ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆಂದು ತಿಳಿದುಬಂದಿದೆ.