Asianet Suvarna News Asianet Suvarna News

ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ರೇಡ್: 5 ದಿನಕ್ಕೊಮ್ಮೆ ಹುಡುಗಿಯರನ್ನ ಬದಲಿಸುತ್ತಿದ್ದ ಪಿಂಪ್ ಅರೆಸ್ಟ್

ದಾಳಿ ವೇಳೆ ಮುಂಬೈಯ ಮೂಲದ ಯುವತಿಯ ರಕ್ಷಣೆ

prostitution raid in belagavi

ಬೆಳಗಾವಿ(ಸೆ.24): ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ಧಾರೆ. ನಗರದ ಟಿಳಕವಾಡಿ ಅಪಾರ್ಟ್` ಮೆಂಟ್​ನಲ್ಲಿ ನಡೆಯುತ್ತಿದ್ದ ಮಾಂಸದ ದಂಧೆ ಮೇಲೆ ದಾಳಿ ನಡೆದಿದೆ.

ಡಿಸಿಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್`ಪೆಕ್ಟರ್ ಬಿ.ಆರ್.ಗಡ್ಡೇಕರ್​ ನೇತೃತ್ವದ ತಂಡದ ಕಾರ್ಯಾಚರಣೆ ನಡೆಸಿದೆ. ಮುಂಬೈಯ ಮೂಲದ ಯುವತಿಯನ್ನ ರಕ್ಷಣೆ ಮಾಡಲಾಗಿದೆ.

ಪ್ರತಿ ಐದು ದಿನಕ್ಕೊಮ್ಮೆ ಹುಡುಗಿಯರನ್ನ ಬದಲಾವಣೆ ಮಾಡುತ್ತಿದ ಪ್ರವೀಣನನ್ನ ಪೊಲೀಸರು ಬಂಧಿಸಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.