Asianet Suvarna News Asianet Suvarna News

ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಲಿಂಗಾಯತ ಸಭೆ ಸ್ಥಾಪನೆ?

* ಅಖಿಲ ಭಾರತ ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಹೊಸ ಪರಿಷತ್​​?

* ಅಖಿಲ ಭಾರತ ಲಿಂಗಾಯತ ಮಹಾಸಭಾ ಅಥವಾ ವಿಶ್ವ ಲಿಂಗಾಯತ ಪರಿಷತ್‌ ಸ್ಥಾಪನೆ?

* ಕೆಲವು ಸಚಿವರೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚರ್ಚೆ

* ಲಿಂಗಾಯತ ಮುಖಂಡ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್​ ಹೇಳಿಕೆ

* ಲಿಂಗಾಯತ ಪದವನ್ನು ಒಪ್ಪುವ ಎಲ್ಲ ಮಠಾಧೀಶರನ್ನು ಒಂದೆಡೆ ಸೇರಿಸಲು ಚಿಂತನೆ

* ಸದಸ್ಯರನ್ನು ಸಂಘಟಿಸುವ ಮೂಲಕ ರಾಜಕೀಯ ರಹಿತ ವೇದಿಕೆಯಾಗಿ ಅಸ್ತಿತ್ವಕ್ಕೆ

* ರೂಪುರೇಷೆ ಸಿದ್ಧಪಡಿಸಲು ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ

* ತೋಂಟದಾರ್ಯ, ಭಾಲ್ಕಿ, ಕೂಡಲ ಸಂಗಮದ ಪಂಚಮಸಾಲಿ ಪೀಠದವರಿಂದ ಬೆಂಬಲ

proposal to start lingayat alternative to veerashaiva mahasabha

ಬೆಂಗಳೂರು(ಜುಲೈ 31): ಅಖಿಲ ಭಾರತ ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಅಖಿಲ ಭಾರತ ಲಿಂಗಾಯತ ಮಹಾಸಭಾ ಅಥವಾ ವಿಶ್ವ ಲಿಂಗಾಯತ ಪರಿಷತ್‌ ಸ್ಥಾಪಿಸಲು ಭರದ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರದ ಕೆಲವು ಪ್ರಮುಖ ಸಚಿವರೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಈ ಕುರಿತಂತೆ ಚರ್ಚೆ ನಡೆದಿದ್ದು, ಶೀಘ್ರವೇ ಒಂದು ನಿರ್ಣಯಕ್ಕೆ ಬರಲಾಗುವುದು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ತಿಳಿಸಿದ್ದಾರೆ. ಲಿಂಗಾಯತ ಪದವನ್ನು ಒಪ್ಪುವ ಎಲ್ಲ ಮಠಾಧೀಶರನ್ನು ಒಂದೆಡೆ ಸೇರಿಸಲಾಗುವುದು. ಸಮಾಜದ ಚಿಂತನಶೀಲರು ಮತ್ತು ಸದಸ್ಯರನ್ನು ಸಂಘಟಿಸುವ ಮೂಲಕ ಇದನ್ನೊಂದು ರಾಜಕೀಯ ರಹಿತ  ವೇದಿಕೆಯಾಗಿ ಅಸ್ತಿತ್ವಕ್ಕೆ ತರಲಾಗುವುದು. ಭವಿಷ್ಯದಲ್ಲಿ ಈ ಕುರಿತ ರೂಪುರೇಷೆಗಳನ್ನು ಸಿದ್ಧಪಡಿಸಲು ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಾಗುವುದು’ ಎಂದು ಪಾಟೀಲ ವಿವರಿಸಿದರು. ಮಠಾಧೀಶರ ವಲಯದಲ್ಲಿ ಗದಗಿನ ತೋಂಟದಾರ್ಯ,  ಭಾಲ್ಕಿ, ಕೂಡಲ ಸಂಗಮದ ಪಂಚಮಸಾಲಿ ಪೀಠ,  ಬೆಳಗಾವಿಯ ರುದ್ರಾಕ್ಷಿ ಮಠದ ಸ್ವಾಮೀಜಿಗಳು ಹಾಗೂ ಮೈಸೂರಿನ ಬಸವ ಜ್ಞಾನ ಮಂದಿರದ ಪೀಠಾಧ್ಯಕ್ಷೆ  ಇದ್ದಾರೆ’ ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios