ವಾಜಪೇಯಿಗೆ ಅಕ್ಷರ ನಮನ ಸಲ್ಲಿಸಿದ ಕನ್ನಡ ಪತ್ರಿಕೆಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Aug 2018, 4:38 PM IST
Prominent kannada newspapers coverage of atal bihari vajpayee demise
Highlights

ಕನ್ನಡದ ಪ್ರಮುಖ ಪತ್ರಿಕೆಗಳು ವಾಜಪೇಯಿ ಅವರಿಗೆ ಹೇಗೆ ಅಕ್ಷರ ನಮನ ಸಲ್ಲಿಸಿದವು ಎಂಬುದನ್ನು ಒಮ್ಮೆ ನೋಡಲೇಬೇಕು. ಪ್ರಮುಖ ಪತ್ರಿಕೆಗಳ ಮುಖಪುಟ  ಇಲ್ಲಿದೆ.

ಮಹಾನ್ ನಾಯಕರು ನಿಧನರಾದಾಗ ಪತ್ರಿಕೆಯೊಂದರ ಮುಖಪುಟ ಮತ್ತು ತಲೆಬರಹ ರೂಪಿಸುವುದು ಸುಲಭದ ಕೆಲಸವಲ್ಲ. ಭರಪೂರ ಮಾಹಿತಿಗಳು ಒಂದು ಕಡೆ, ನಿಧನರಾದ ವ್ಯಕ್ತಿಯ ಬೃಹತ್ ಸಾಧನೆ ಇನ್ನೊಂದು ಕಡೆ... ಒಟ್ಟಿನಲ್ಲಿ ಎಲ್ಲರಿಗೂ ಒಪ್ಪುವ, ಮೆಚ್ಚುವ ಮತ್ತೆ ಸದಾ ನೆನಪಿನಲ್ಲಿ ಉಳಿಯುವಂತಹ ಹೆಡ್ ಲೈನ್ ನೀಡುವುದು ಕಷ್ಟ ಸಾಧ್ಯವಾದ ಕೆಲಸ.

ವಾಜಪೇಯಿ ಅವರ ನಿಧನದ ಸುದ್ದಿ ಅದಾಗಲೇ ಎಲ್ಲ ಕಡೆ ಬಿತ್ತರವಾಗಿದ್ದರೆ ಪತ್ರಿಕೆಗಳಿಗೆ ನಾಳಿನ ಹೆಡ್ ಲೈನ್ ನೀಡುವ ಯೋಚನೆ, ಆಲೋಚನೆ, ಚಿಂತನೆ ಎಲ್ಲವೂ ಒಂದೇ ಸಂದರ್ಭದಲ್ಲಿ ಎದುರಾಗಿದ್ದು. ಹಿಂದೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ಸಾಧನೆ ಮಾಡಿದಾಗಲೂ ಇಂಥದ್ದೆ ಚರ್ಚೆ ನಡೆದಿತ್ತು. ಅಬ್ದುಲ್ ಕಲಾಂ ನಿಧನ, ಜಯಲಲಿತಾ ನಿಧನ, ಕರುಣಾನಿಧಿ ನಿಧನದ ವೇಳೆಯೂ ತಲೆಬರಹಕ್ಕೆ ಹುಡುಕಾಟ ನಡೆದಿತ್ತು.

ಈ ತಲೆಬರಹಗಳು ಎಷ್ಟೇ ಆಲೋಚನೆ ಮಾಡಿದರೂ ಹೊಳೆಯುವುದಿಲ್ಲ. ಮಾತನಾಡುತ್ತ-ಮಾತನಾಡುತ್ತ ಇರುವಾಗ ಒಂದು ಅದ್ಭುತ ತಲೆಬರಹ ಹೊಳೆದು ಬಿಡಬಹುದು. ಎರಡನೇ ಸಾಧ್ಯತೆಯೇ ಹಲವಾರು ಸಂದರ್ಭದಲ್ಲಿ ಯಶಸ್ವಿಯಾಗಿದ್ದನ್ನು ನೋಡಿದ್ದೇವೆ. ಹಾಗಾದರೆ ಕನ್ನಡದ ಪ್ರಮುಖ ದಿನಪತ್ರಿಕೆಗಳು ಅಟಲ್‌ ಗೆ ಯಾವ ಬಗೆಯಾಗಿ ಅಂತಿಮ ನಮನ ಸಲ್ಲಿಕೆ ಮಾಡಿದವು.. ನೀವೇ ನೋಡಿ

ಕನ್ನಡಪ್ರಭ

ಉದಯವಾಣಿ

ವಿಜಯ ಕರ್ನಾಟಕ

ವಿಜಯವಾಣಿ

ವಿಶ್ವವಾಣಿ

ಪ್ರಜಾವಾಣಿ

 

loader