Asianet Suvarna News Asianet Suvarna News

ಅಮಿನ್ ಮಟ್ಟು ವಿರುದ್ಧ ಆರೋಪ : ತನಿಖೆಗೆ ಮನವಿ

ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದ್ದು, ಅದರ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿ ಸೋಮವಾರ ಪೊಲೀಸ್ ಆಯುಕ್ತರಿಗೆ ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಮನವಿ ಮಾಡಿದ್ದಾರೆ.
 

Progressive Thinkers Comes Out in Support Dinesh Amin Mattu

ಬೆಂಗಳೂರು :  ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರ ಮೇಲೆ ಸುಳ್ಳು ಆರೋಪ ಮಾಡಲಾಗಿದ್ದು, ಅದರ ಬಗ್ಗೆ ಸಮಗ್ರ ತನಿಖೆ ನಡೆಸಿ ಎಂದು ಒತ್ತಾಯಿಸಿ ಸೋಮವಾರ ಪೊಲೀಸ್ ಆಯುಕ್ತರಿಗೆ ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು ಮನವಿ ಮಾಡಿದ್ದಾರೆ.

ಕೆಲದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರಹಗಾರ ರೋಹಿತ್ ಚಕ್ರತೀರ್ಥ ಅವರ ಹತ್ಯೆಗೆ ಭಾಸ್ಕರ್ ಪ್ರಸಾದ್ ಎಂಬುವವರಿಗೆ ದಿನೇಶ್ ಅಮಿನ್‌ಮಟ್ಟು ಸುಪಾರಿ ನೀಡಿದ್ದರು ಎಂದು ಸುದ್ದಿ ಹರಿದಾಡುತ್ತಿದೆ. ಈ ಆರೋಪವು ಸತ್ಯಕ್ಕೆ ದೂರವಾದ  ಗತಿಯಾಗಿದ್ದು, ಈ ಕುರಿತು ನಮ್ಮ ಸಂಪೂರ್ಣ ಸ್ಪಷ್ಟನೆ ನೀಡಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಮಿನ್‌ಮಟ್ಟು ಅವರು ಜನಪರ ಮತ್ತು ಜೀವ ಪರವುಳ್ಳ ವ್ಯಕ್ತಿ. ಸುಪಾರಿಯಂಥ ಹೇಳಿಕೆ ನೀಡುವುದಿರಲಿ, ಈ ನಿಟ್ಟಿನಲ್ಲಿ  ಯೋಚಿ ಸುವುದೂ ಸಹ ಸಾಧ್ಯವಿಲ್ಲ. ಎಲ್ಲಾ ಸಮುದಾಯದ ವರೊಡನೆಯೂ ಪ್ರೀತಿ ಸೌಹಾರ್ದತೆಯಿಂದಿರುವ ಅವರು, ತಮ್ಮನ್ನು ವಿರೋಧಿಸುವವರನ್ನೂ ಸಹ ಗೌರವ ಮತ್ತು ವಿಶ್ವಾಸದಿಂದಲೇ ನಡೆಸಿಕೊಳ್ಳುತ್ತಾರೆ. ಹೀಗಾಗಿ ಸುಪಾರಿಯಂತಹ ಗಂಭೀರವಾದ ಸುಳ್ಳು ಆರೋಪವನ್ನು ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಚಿಂತಕರು ಆಗ್ರಹಿಸಿದ್ದಾರೆ.

ಈ ಸುಳ್ಳು ಆರೋಪ ಕುರಿತು ಡಿಜೆ ಹಳ್ಳಿ ಠಾಣೆಯಲ್ಲಿ ಅಮಿನ್‌ಮಟ್ಟು ಅವರು ದಾಖಲಿಸಿರುವ ಪ್ರಕರಣದ ಪಾರದರ್ಶಕ ತನಿಖೆ ನಡೆಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗಿರುವ ಈ ಸುಳ್ಳು ಆರೋಪವನ್ನು ಕೆಲ ಬಲಪಂಥೀಯ ಅಥವಾ ಸಮಾಜ ವಿದ್ರೋಹಿಗಳು ದುರ್ಬಳಕೆ ಮಾಡಿಕೊಳ್ಳಬಹುದು. ಸಮಾಜದಲ್ಲಿ ಅರಾಜಕತೆ, ಅಪನಂಬಿಕೆಗೆ ಅವಕಾಶ ನೀಡ ಬಾರದೆನ್ನುವ ಕಳಕಳಿಯಿಂದಾಗಿ ಈ ಬಗ್ಗೆ ಎಚ್ಚರಿಕೆಯ ಕ್ರಮಕೈಗೊಳ್ಳಲು ಕೋರುತ್ತೇವೆ ಎಂದು ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಕೋರ ಬಲಪಂಥೀಯರ ಬಂಧನ ಬೆನ್ನಲೆ ಸುಪಾರಿ ಆರೋಪವನ್ನು ಹಬ್ಬಿಸಲಾಗುತ್ತಿದೆ.ಬಲಪಂಥೀ ಯರ ಟಾರ್ಗೆಟ್ ಆಗಿರುವ ವಿಚಾರವಾದಿಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಕುತಂತ್ರವಾಗಿದ್ದು, ಜನಪರ ಚಳುವಳಿಗಳನ್ನು ದಾರಿ ತಪ್ಪಿಸುವ, ದುರ್ಬಳಕೆ ಮಾಡಿಕೊಳ್ಳುವವರ ಕುರಿತು ಸೂಕ್ತ ನಿಗಾವಹಿಸಲು ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಚಿಂತಕರಾದ ಜಿ.ಕೆ.ಗೋವಿಂದರಾವ್, ಡಾ.ಕೆ. ಮರುಳಸಿದ್ದಪ್ಪ, ಎಸ್.ಜಿ.ಸಿದ್ರಾಮಯ್ಯ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಹಿರಿಯರಾದ ಇಂದೂಧರ ಹೊನ್ನಾಪುರ, ಡಾ. ವಿಜಯಮ್ಮ, ದಲಿತ ಮುಖಂಡರಾದ ಎನ್. ವೆಂಕಟೇಶ್, ಎನ್.ಮುನಿಸ್ವಾಮಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಆರ್. ಮೋಹನ್ ರಾಜ್, ಗುರುಪ್ರಸಾದ್ ಕೆರೆಗೋಡು, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ, ಇಂದಿರಾ ಕೃಷ್ಣಪ್ಪ, ಸಮಾಜ ಕ್ಷಣಕ್ಕಾಗಿ ಜನಾಂದೋಲನದ ಡಾ.ಶ್ರೀಪಾದ ಭಟ್, ಕೆ.ಎಸ್. ವಿಮಲ, ಕೆ.ನೀಲಾ, ಎಸ್.ಸತ್ಯಾ, ವಿಲ್ಪೆಂಡ್ ಡಿಸೋಜಾ ಹಾಗೂ ಬಸವರಾಜ ಸೂಳಿಬಾವಿ ಸೇರಿದಂತೆ 34 ಮಂದಿ ಪತ್ರ ಬರೆದಿದ್ದಾರೆ.

Follow Us:
Download App:
  • android
  • ios