ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಕಾದರೆ ನೀನು ನನಗೆ ಮುತ್ತು ಕೊಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳಿಗೆ ಬೇಡಿಕೆ ಇಟ್ಟಿದ್ದ ಘಾಟ್ಕೋಪರ್‌ನ ಕಾಲೇಜು ಪ್ರಾಧ್ಯಾಪಕನೊಬ್ಬನನ್ನು ಬಂಧಿಸಲಾಗಿದೆ.
ಮುಂಬೈ: ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬೇಕಾದರೆ ನೀನು ನನಗೆ ಮುತ್ತು ಕೊಡಬೇಕು ಎಂದು ವಿದ್ಯಾರ್ಥಿನಿಯೊಬ್ಬಳಿಗೆ ಬೇಡಿಕೆ ಇಟ್ಟಿದ್ದ ಘಾಟ್ಕೋಪರ್ನ ಕಾಲೇಜು ಪ್ರಾಧ್ಯಾಪಕನೊಬ್ಬನನ್ನು ಬಂಧಿಸಲಾಗಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕ ಈ ರೀತಿ ಬೇಡಿಕೆ ಇಟ್ಟಿದ್ದ. ಇದರಿಂದ ತೀವ್ರ ನೊಂದ ಆಕೆ ಎಲ್ಲರೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದಳು. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬ ಸದಸ್ಯರು ಹಲವು ದಿನಗಳ ಕಾಲ ಆಕೆಯ ಬಾಯಿ ಬಿಡಿಸಲು ಯತ್ನಿಸಿದ ಮೇಲೆ ಆಕೆಯ ವಿಷಯ ಬಹಿರಂಗಪಡಿಸಿದ್ದಾಳೆ.
ಬಳಿಕ ಈ ಬಗ್ಗೆ ಕುಟುಂಬ ಸದಸ್ಯರು ದೂರಿತ್ತ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ.
