ಕೇಂದ್ರ ಸರ್ಕಾರ ಜಾರಿ ತಂದಿರುವ ಜಾನುವಾರುಗಳ ಮಾರಾಟ ನಿರ್ಬಂಧ ನಿಯಮಾವಳಿ ವಿರೋಧಿಸಿ ಆಯೋಜಿಸಿದ್ದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ' ಸಂವಾದ ಕಾರ್ಯಕ್ರಮವನ್ನು ಗೋಮಾಂಸ, ಚಿಕನ್‌ ಕಬಾಬ್‌ ಸೇವನೆ ಮಾಡುವ ಮೂಲಕ ವಿಚಾರವಾದಿ ಪ್ರೊ. ಕೆ.ಎಸ್‌. ಭಗವಾನ್‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವು ಪವಿತ್ರವಾದ್ದರಿಂದಲೇ ಅದನ್ನು ಭಕ್ಷಣೆ ಮಾಡಬೇಕು ಎಂದರು.
ಬೆಂಗಳೂರು(ಜೂ.26): ಕೇಂದ್ರ ಸರ್ಕಾರ ಜಾರಿ ತಂದಿರುವ ಜಾನುವಾರುಗಳ ಮಾರಾಟ ನಿರ್ಬಂಧ ನಿಯಮಾವಳಿ ವಿರೋಧಿಸಿ ಆಯೋಜಿಸಿದ್ದ ‘ಆಹಾರದ ಹಕ್ಕು- ವ್ಯಕ್ತಿ ಸ್ವಾತಂತ್ರ್ಯ' ಸಂವಾದ ಕಾರ್ಯಕ್ರಮವನ್ನು ಗೋಮಾಂಸ, ಚಿಕನ್ ಕಬಾಬ್ ಸೇವನೆ ಮಾಡುವ ಮೂಲಕ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವು ಪವಿತ್ರವಾದ್ದರಿಂದಲೇ ಅದನ್ನು ಭಕ್ಷಣೆ ಮಾಡಬೇಕು ಎಂದರು.
ಗೋವು ದೇಹಕ್ಕೆ ಅತ್ಯುತ್ತಮ ಆಹಾರವೆಂದು ವೈದಿಕರು ಹಿಂದೆಯೇ ಹೇಳಿದ್ದಾರೆ. ಅಂಬೇಡ್ಕರ್ ರಚಿಸಿರುವ 7ನೇ ಸಂಪುಟದ 324, 327, 328ನೇ ಪುಟಗಳಲ್ಲಿ ಗೋವು ಮಾಂಸದ ಬಗ್ಗೆ ಬರೆದಿದ್ದಾರೆ. ಅಸಸ್ತಂಭ ಸೂತ್ರದಲ್ಲಿ ‘ಹಸು ಮತ್ತು ಗೂಳಿ ಪವಿತ್ರವಾದದು. ಅದರ ಮಾಂಸವನ್ನು ಭಕ್ಷಿಸಿದರೆ ದೇಹಕ್ಕೆ ಒಳ್ಳೆಯದು. ಶಕ್ತಿ, ಉತ್ಸಾಹ ಹೆಚ್ಚಾಗುತ್ತದೆ' ಎಂದಿದ್ದಾರೆ. ಶತಪಥ ಬ್ರಾಹ್ಮಣ ದಲ್ಲೂ ಇದೇ ಮಾತುಗಳು ಉಲ್ಲೇಖವಾಗಿವೆ. ಗೋಮಾಂಸವನ್ನು ಹೆಚ್ಚಾಗಿ ತಿನ್ನುತ್ತಿದ್ದ ಬ್ರಾಹ್ಮಣರು, ಬೌದ್ಧ ಧಮ್ಮ ಉದಯವಾದಾಗ ಅವರ ಮುಂದೆ ತಾವು ಕೀಳಾಗುತ್ತೇವೆ ಎಂಬ ಕಾರಣಕ್ಕೆ ಗೋ ಮಾಂಸ ಸೇವನೆ ನಿಲ್ಲಿಸಿದರು ಎಂ ದರು. ಉಪಹಾರವಾಗಿ ಕೇಸರಿಬಾತ್, ಉಪ್ಪಿಟ್ಟು, ಪೊಂಗಲ್, ಗೋಮಾ ಂಸ, ಚಿಕನ್ ಕಬಾಬ್; ಊಟವಾಗಿ ಬೀಫ್ ಬಿರಿಯಾನಿ, ಕೇಸರಿ ಬಾತ್ ನೀಡಲಾಯಿತು.
