ಬಾಕ್ಸಾಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಬಾಚಿದ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿಯ ನಿರ್ಮಾಪಕನ ಮನೆ ಮೇಲೆ ದಾಳಿ ನಡೆಸಲಾಗಿದೆ.

ಹೈದರಾಬಾದ್ (ನ.11): ಬಾಕ್ಸಾಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಬಾಚಿದ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿಯ ನಿರ್ಮಾಪಕನ ಮನೆ ಮೇಲೆ ದಾಳಿ ನಡೆಸಲಾಗಿದೆ.

ಐತಿಹಾಸಿಕ ಚಿತ್ರ ಬಾಹುಬಲಿ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ 2015 ಜುಲೈನಲ್ಲಿ ಬಿಡುಗಡೆಯಾಗಿತ್ತು. ಜಗತ್ತಿನಾದ್ಯಂತ ರೂ.650 ಕೋಟಿ ಗಳಿಸಿತ್ತು.

ನಿರ್ಮಾಪಕ ಶೋಭು ಯಾರ್ಲಗದ್ದ ಹಾಗೂ ಪ್ರಸಾದ್ ದೇವಿನೇನಿ ಮನೆ ಮೇಲೆ ಇಂದು ದಾಳಿ ನಡೆಸಲಾಗಿದೆ. 500 ಹಾಗೂ 1000 ನೋಟುಗಳ ರದ್ದು ಮಾಡಿದ್ದರೂ ಅವರ ನಿವಾಸದಲ್ಲಿ ಬೃಹತ್ ಮೊತ್ತವನ್ನು ಕೂಡಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.