ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾಗಿರುವ ಮಂಜುಳಾ ಅವರು ಸಿಂಧಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ

ಬೆಂಗಳೂರು(ಡಿ.29): ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಂಜುಳಾ ಹಾಗೂ ಚಲನಚಿತ್ರ ನಿರ್ಮಾಪಕ ಗೋವರ್ಧನಮೂರ್ತಿ ಅವರ ವಿವಾಹ ಸರಳವಾಗಿ ನಡೆದಿದೆ.

ಕಾಂಗ್ರೆಸ್ ವಲಯದಲ್ಲಿ ಯುವ ನಾಯಕಿಯೆಂದೇ ಗುರುತಿಸಿಕೊಂಡಿರುವ ಮಂಜುಳಾ ಅವರ ವಿವಾಹ ದೇವಾಲಯವೊಂದರಲ್ಲಿ ನಡೆದಿದ್ದು, ಗುರುವಾರ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರ ಆಪ್ತ ಸಂಬಂಧಿಯಾಗಿರುವ ಮಂಜುಳಾ ಅವರು ಸಿಂಧಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ