ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಸೆ.4ರಂದು ಆಡಳಿತ ಮಂಡಳಿ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ನೀಡಿದ್ದರು.
ಬೆಳಗಾವಿ(ಸೆ.18):ಸಹಕಾರಿ ಬ್ಯಾಂಕ್ ದಿವಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ನಂದ್ ಅಪ್ಪುಗೋಳ್ ಅವರನ್ನು ಮುಂಬೈ'ನಲ್ಲಿ ಬಂಧಿಸಲಾಗಿದೆ.
ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಹಕಾರಿಬ್ಯಾಂಕ್ ದಿವಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆಸಹಕಾರಿ ಸಂಘಗಳ ಸಹಾಯಕ ನಿಬಂಧಕರುಸೆ.4ರಂದು ಆಡಳಿತ ಮಂಡಳಿ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ನೀಡಿದ್ದರು.
ಅಪ್ಪುಗೋಳ್ ವಿರುದ್ಧ ಠೇವಣಿದಾರರಿಗೆ ನಂಬಿಕೆ ದ್ರೋಹ, ಮೋಸ, ವಂಚನೆ, ಠೇವಣಿದಾರರಿಗೆ ನಂಬಿಕೆ ದ್ರೋಹ, ಸಾರ್ವಜನಿಕರ ಠೇವಣಿ ಹಣವನ್ನ ಸಕಾಲಕ್ಕೆ ಪಾವತಿಲ್ಲ, ನಿಯಮವನ್ನು ಗಾಳಿಗೆ ತೂರಿ ಠೇವಣಿ ಹಣವನ್ನು ಬೇಕಾಬಿಟ್ಟಿ ವಿನಿಯೋಗ ಹಾಗೂ ಬ್ಯಾಂಕ್ ಕಚೇರಿಗೆ ಬೀಗ ಹಾಕಿ ಠೇವಣಿದಾರರಿಗೆ ಮೋಸಮಾಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು.
ಸೆ.4ರಿಂದ ಅಪ್ಪುಗೋಳ್ ತಲೆಮರೆಸಿಕೊಂಡಿದ್ದರು. ಗ್ರಾಹಕರು ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು.
