ಈ ಹಿಂದೆ ಪಾಸ್‌ಪೋರ್ಟ್ ನೀಡಿದ ಐದು ವರ್ಷಗಳೊಳಗಾಗಿ ಮಾತ್ರ ಜನನ ದಿನಾಂಕ ಬದಲಾಯಿಸಿಕೊಳ್ಳಲು ಅವಕಾಶವಿತ್ತು.

ನವದೆಹಲಿ(ಡಿ.11): ಪ್ರಸ್ತುತ ಇರುವ ಪಾಸ್‌ಪೋರ್ಟ್‌ಗಳಲ್ಲಿನ ಜನನ ದಿನಾಂಕ ಬದಲಾವಣೆ ನಿಯಮವನ್ನು ಸಡಿಲಗೊಳಿಸಲಾಗಿದೆ. ಅಲ್ಲದೆ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಇತರ ಕೆಲವು ನಿಯಮಗಳನ್ನೂ ಇನ್ನಷ್ಟು ಸುಲಭವಾಗಿಸಲು ಸರ್ಕಾರ ನಿರ್ಧರಿಸಿದೆ. ಡಿಜಿಟಲ್ ಸಹಿ ಮಾಡಲಾದ ವಿವಾಹ ಮತ್ತು ಜನನ ದೃಢೀಕರಣ ಪತ್ರಗಳನ್ನು ವಿವಾಹ ಮತ್ತು ಜನನ ದಿನಾಂಕಗಳಿಗೆ ಸಾಕ್ಷಿಯಾಗಿ ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಸ್‌ಪೋರ್ಟ್ ವಿತರಣಾ ಪ್ರಾಧಿಕಾರ (ಪಿಐಎ)ದ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದ್ದು, ಪಾಸ್‌ಪೋರ್ಟ್ ನೀಡಿದ ಯಾವುದೇ ಸಮಯದ ಬಳಿಕವಾದರೂ ಜನನ ದಿನಾಂಕ ಬದಲಾಯಿಸಿಕೊಳ್ಳಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಪಾಸ್‌ಪೋರ್ಟ್ ನೀಡಿದ ಐದು ವರ್ಷಗಳೊಳಗಾಗಿ ಮಾತ್ರ ಜನನ ದಿನಾಂಕ ಬದಲಾಯಿಸಿಕೊಳ್ಳಲು ಅವಕಾಶವಿತ್ತು. ಅಲ್ಲದೆ ಅದನ್ನು ಬದಲಾಯಿಸಿಕೊಳ್ಳಲು ದೀರ್ಘಕಾಲದ ಪ್ರಕ್ರಿಯೆ ನಡೆಯುತ್ತಿತ್ತು ಮತ್ತು ಹಲವಾರು ದಾಖಲೆಗಳನ್ನು ಸಿದ್ಧಪಡಿಸಬೇಕಾಗುತ್ತಿತ್ತು.