ಬೆಂಗಳೂರಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟ ಮಿತಿಮೀರಿದೆ. ಆಫ್ರಿಕಾ ಮೂಲದ ವಾಸ್-ಯೂ ಎಂಬಾತ ಜನ ಓಡಡುವ ಸ್ಥಳದಲ್ಲೇ ಮೂತ್ರವಿಸರ್ಜನೆ ಮಾಡಿ ಆಟಾಟೋಪ ಮೆರೆದಿದ್ದಾನೆ.

ಬೆಂಗಳೂರು(ಅ.17): ಬೆಂಗಳೂರಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟ ಮಿತಿಮೀರಿದೆ. ಆಫ್ರಿಕಾ ಮೂಲದ ವಾಸ್-ಯೂ ಎಂಬಾತ ಜನ ಓಡಡುವ ಸ್ಥಳದಲ್ಲೇ ಮೂತ್ರವಿಸರ್ಜನೆ ಮಾಡಿ ಆಟಾಟೋಪ ಮೆರೆದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಕೋಗಿಲು ಕ್ರಾಸ್ ನಲ್ಲಿ, ನಿನ್ನೆ ರಾತ್ರಿ 10ಕ್ಕೆ ನಡೆದಿದೆ. ಕಂಠಮಟ್ಟ ಕುಡಿದಿದ್ದ ವಾಸ್ ಯೂ, ಕೋಗಿಲು ಕ್ರಾಸ್​'ನ ಉಡುಪಿ ಗ್ರಾಂಡ್ ಹೋಟೆಲ್ ಸರ್ಕಲ್ ಬಳಿ ಊಟ ಪಾರ್ಸೆಲ್ ಮಾಡಿಸಿಕೊಂಡು ಹೊರ ಬಂದಿದ್ದಾರೆ. ಬಳಿಕ ಜನ ಓಡಾಡುವ ಸ್ಥಳದಲ್ಲೆ ಮೂತ್ರ ವಿಸರ್ಜಿಸಿ, ಯುವತಿಯರು, ಮಹಿಳೆಯರು ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ್ದಾನೆ.

ಜಂಕ್ಷನ್'ನಲ್ಲಿ ಈ ರೀತಿ ಮಾಡಬಾರದೆಂದಿದ್ದಕ್ಕೆ ಸ್ಥಳೀಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬಳಿಕ ಜನರು ತನಗೆಲ್ಲಿ ಥಳಿಸುವರೋ ಎಂದು ಅರಿವಾಗಿ ತನ್ನ ಕಾಲಿಗೆ ಬುದ್ದಿ ಹೇಳಿ, ಅಲ್ಲಿಂದ ಪರಾರಿಯಾಗಿದ್ದಾನೆ