ಸೇನಾ ವಿಚಾರಗಳ ಕುರಿತು ಚರ್ಚೆಗಾಗಿ ಏರ್ಪಡಿಸಿದ್ದ ಇಲ್ಲಿ ಆಯೋಜಿಸಿದ್ದ ಸಭೆಯಲ್ಲೇ ಅಧಿಕಾರಿಯೊಬ್ಬರ ಲ್ಯಾಪ್‌ಟಾಪ್‌ನಲ್ಲಿ ಅಶ್ಲೀಲ ಚಿತ್ರದ ವಿಡಿಯೊ ಪ್ರಸಾರವಾದ ಘಟನೆ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿರುವ ಸೇನಾ ಮುಖ್ಯ ಕಚೇರಿಯಲ್ಲಿ ನಡೆದಿದೆ.
ಇದರಿಂದಾಗಿ ಭಾರತೀಯ ಗಡಿ ಭದ್ರತಾ ಸೇನೆ ಮುಜುಗರಕ್ಕೀಡಾಗಿದೆ. 8 ಮಹಿಳಾ ಸಿಬ್ಬಂದಿ ಭಾಗಿಯಾಗಿದ್ದ ಸಭೆಯಲ್ಲಿ ಅಧಿಕಾರಿಯೊಬ್ಬರ ಲ್ಯಾಪ್ಟಾಪ್ನಲ್ಲಿ ಅಶ್ಲೀಲ ವಿಡಿಯೊ ಆರಂಭವಾದ ಕುರಿತು ಪಂಜಾಬ್ ಗಡಿಯ ಬಿಎಸ್ಎಫ್ ಐಜಿ ಮುಕುಲ್ ಗೋಯಲ್ ತನಿಖೆಗೆ ಆದೇಶಿಸಿದ್ದಾರೆ. ಸುಮಾರು 90 ಸೆಕೆಂಡ್ ಅಶ್ಲೀಲ ವಿಡಿಯೊ ಪ್ಲೇ ಆಗಿದೆ.
(ಸಾಂದರ್ಭಿಕ ಚಿತ್ರ)
