ಕೇಂದ್ರ ಸರ್ಕಾರ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ತಾರತಮ್ಯ ಮಾಡುತ್ತಿದೆ. ಇಡೀ ಕರ್ನಾಟಕ ಒತ್ತಾಯಿಸಿದರೂ ಕಳಾಸ ಬಂಡೂರಿ ಯೋಜನೆಗೆ ಅವಕಾಶ ನೀಡುತ್ತಿಲ್ಲ, ಕೇಂದ್ರದ ಈ ಧೋರಣೆ ಖಂಡಿಸಿ ಫೆಬ್ರವರಿ 18 ರಂದು ಎಲ್ಲಾ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ವಾಟಾಳ್ ಹೇಳಿದ್ದಾರೆ.
ಚಾಮರಾಜನಗರ (ಜ.24): ಮಹದಾಯಿ ಕಳಾಸ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಫೆಬ್ರವರಿ 18 ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚಾಮರಾಜನಗರ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ವಾಟಾಳ್ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ತಾರತಮ್ಯ ಮಾಡುತ್ತಿದೆ. ಇಡೀ ಕರ್ನಾಟಕ ಒತ್ತಾಯಿಸಿದರೂ ಕಳಾಸ ಬಂಡೂರಿ ಯೋಜನೆಗೆ ಅವಕಾಶ ನೀಡುತ್ತಿಲ್ಲ, ಕೇಂದ್ರದ ಈ ಧೋರಣೆ ಖಂಡಿಸಿ ಫೆಬ್ರವರಿ 18 ರಂದು ಎಲ್ಲಾ ಕನ್ನಡ ಸಂಘಟನೆಗಳಿಂದ ಕರ್ನಾಟಕ ಬಂದ್ ನಡೆಸಲಾಗುವುದು ಎಂದರು.
ತಮಿಳುನಾಡಿನ ಜಲ್ಲಿಕಟ್ಟಿಗೆ ಅವಕಾಶ ನೀಡಿದಂತೆ ಕರ್ನಾಟಕದ ಕಂಬಳಕ್ಕೂ ಅವಕಾಶ ನೀಡಬೇಕು ಎಂದು ನಾಳೆ ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ಹೇಳಿದರು.
