ದುರಂತ ಅಂದರೆ ವಿವಿ ಕ್ಯಾಂಪಸ್​ನಲ್ಲಿ ಸಿಸಿಟಿವಿಗಳಿದ್ದರೂ ದೃಶ್ಯಗಳು ಸೆರೆಯಾಗಿಲ್ಲ.

ನವದೆಹಲಿ(ಮೇ.28): ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ದೇಶವಿರೋಧಿ ಕೂಗು ಕೇಳಿಬಂದಿದೆ. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್​ನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆ ಐಸಿಸ್ ಪರ ಘೋಷಣೆ ಕೂಗಿದ್ದಾರೆ.

DUSU ವಿವಿ ಕ್ಯಾಂಪಸ್​ನ ಗೋಡೆಗಳ ಮೇಲೆ ಇಂಗ್ಲಿಷ್, ತಮಿಳು, ಹಿಂದಿ, ಕನ್ನಡದಲ್ಲಿ ಘೋಷಣೆ ರಾರಾಜಿಸುತ್ತಿವೆ. ಗೋಡೆಗಳ ಮೇಲೆ ಕಿಡಿಗೇಡಿಗಳು ಐಸಿಸ್ ಜಿಂದಾಬಾದ್ ಅಂತ ಬರೆದು ಅಟ್ಟಹಾಸ ಮೆರೆದಿದ್ದಾರೆ. ದುರಂತ ಅಂದರೆ ವಿವಿ ಕ್ಯಾಂಪಸ್​ನಲ್ಲಿ ಸಿಸಿಟಿವಿಗಳಿದ್ದರೂ ದೃಶ್ಯಗಳು ಸೆರೆಯಾಗಿಲ್ಲ. ಈ ಬಗ್ಗೆ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಕಾರ್ಯದರ್ಶಿ ಅಂಕಿತ್ ಸಿಂಗ್ ಸಂಗ್ವಾನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ದೆಹಲಿಯ ಜೆಎನ್​ಯು ಕ್ಯಾಂಪಸ್​ನಲ್ಲಿ ಇದೇ ರೀತಿ ಐಸಿಸ್ ಪರ ಘೋಷಣೆ ಕೇಳಿ ಬಂದಿತ್ತು.

ಚಿತ್ರಕೃಪೆ: ನ್ಯೂಸ್ ಎಕ್ಸ್