ಮುಂಬೈ (ಡಿ. 04): ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ರ ಬಹುನಿರೀಕ್ಷಿತ ವಿವಾಹದ ಮುಗಿದ ಬೆನ್ನಲ್ಲೇ, ವಿವಾಹದ ಕುರಿತು ವಿವಾದಗಳೂ ಎದ್ದಿವೆ.

ಕ್ರೈಸ್ತ ಶೈಲಿಯಲ್ಲಿ ಮದುವೆಯಾದ ದಿನ ಜೋಧ್‌ಪುರ ಅರಮನೆ ಬಳಿ ಭಾರೀ ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಕಾರಣ, ಅಸ್ತಮಾ ರೋಗಿಗಳ ಪರ ಔಷಧ ತಯಾರಿಸುವ ಕಂಪನಿಯೊಂದ ಜಾಹೀರಾತಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ, ಪಟಾಕಿ ಸಿಡಿತದಿಂದ ಅಸ್ತಮಾ ಹೆಚ್ಚಾಗುತ್ತದೆ. ಹೀಗಾಗಿ ದೀಪಾವಳಿಯಲ್ಲಿ ದೀಪದಿಂದ ಮಾತ್ರ ಆರಿಸೋಣ ಎಂದು ಕರೆ ನೀಡಿದ್ದರು.

ಆದರೆ ಇದೀಗ ಅವರೇ ಸ್ವತಃ ತಮ್ಮ ಮದುವೆ ವೇಳೆ ಭಾರೀ ಪಟಾಕಿ ಸಿಡಿಸಿದ್ದು ಟೀಕೆಗೆ ಕಾರಣವಾಗಿದೆ. ಇನ್ನು ಹಿಂದೂ ಶೈಲಿಯ ಮದುವೆ ವೇಳೆ ಆನೆ ಮತ್ತು ಕುದುರೆಗಳನ್ನು ಹಿಂಸಾತ್ಮಕ ರೀತಿಯಲ್ಲಿ  ಬಳಸಿಕೊಳ್ಳಲಾಗಿದೆ ಎಂದು ಪ್ರಾಣಿ ದಯಾ ಸಂಘಟನೆಯಾದ ಪೇಟಾ ಆಕ್ಷೇಪ ವ್ಯಕ್ತಪಡಿಸಿದೆ.