ಪ್ರಿಯಾಂಕಾ ಬಳಿ ಬಂದಿದ್ದ ಚಿತ್ರದ ವಸ್ತ್ರ ವಿನ್ಯಾಸಕ, ನೀವು ತುಂಡುಡುಗೆ ತೊಡಬೇಕು ಎಂದು ಹೇಳಿದ್ದರಂತೆ.
ಮುಂಬೈ(ನ.13): ಚಿತ್ರವೊಂದರಲ್ಲಿ ಅತಿಯಾಗಿ ದೇಹಪ್ರದರ್ಶನಕ್ಕೆ ನಿರಾಕರಿಸಿದ ಪರಿಣಾಮ ಪ್ರಿಯಾಂಕಾ ಚೋಪ್ರಾ, ಅದಕ್ಕಾಗಿ ಕನಿಷ್ಠ 10 ಚಿತ್ರಗಳ ನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು ಎಂದು ಪ್ರಿಯಾಂಕಾರ ತಾಯಿ ಮಧು ಚೋಪ್ರಾ ಬಹಿರಂಗಪಡಿಸಿದ್ದಾರೆ.
ಕೆಲ ಸಮಯದ ಹಿಂದೆ ಪ್ರಿಯಾಂಕಾ, ಖ್ಯಾತ ನಾಮ ನಿರ್ದೇಶಕರ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಈ ವೇಳೆ ಪ್ರಿಯಾಂಕಾ ಬಳಿ ಬಂದಿದ್ದ ಚಿತ್ರದ ವಸ್ತ್ರ ವಿನ್ಯಾಸಕ, ನೀವು ತುಂಡುಡುಗೆ ತೊಡಬೇಕು ಎಂದು ಹೇಳಿದ್ದರಂತೆ. ಇದಕ್ಕೆ ಆಕೆ ನಿರಾಕರಿಸಿದಾಗ, ಕ್ಯಾಮೆರಾದಲ್ಲಿ ಆಕೆಯ ಸೌಂದರ್ಯ ವನ್ನು ತೋರಿಸದೇ ಹೋದಲ್ಲಿ, ಆಕೆ ವಿಶ್ವ ಸುಂದರಿಯಾಗಿದ್ದರೇನು ಬಂತು ಎಂದು ನಿರ್ದೇಶಕರು ಕಿಡಿಕಾರಿದ್ದರಂತೆ. ಹೀಗಾಗಿ ಪ್ರಿಯಾಂಕಾ ಚಿತ್ರದಿಂದಲೇ ಹೊರಬಂದಿದ್ದರು. ಇದರಿಂದ ಸಿಟ್ಟಾದ ಆ ಪ್ರಖ್ಯಾತ ನಿರ್ದೇಶಕರು, ಮುಂದೆ ಪ್ರಿಯಾಂಕಾಗೆ ಕನಿಷ್ಠ 10 ಚಿತ್ರ ಕೈತಪ್ಪುವಂತೆ ನೋಡಿಕೊಂಡಿದ್ದರು ಎಂದು ಮಧು ಹೇಳಿದ್ದಾರೆ.
--
