ಹಿಂದೂಗಳು ಉಗ್ರರೆಂದು ಬಿಂಬಿಸಿದಕ್ಕೆ ನಟಿ ಪ್ರಿಯಾಂಕಾ ಕ್ಷಮೆ

Priyanka Chopra apologizes over 'Quantico' episode
Highlights

  • ಅಮೆರಿಕದ ‘ಕ್ವಾಂಟಿಕೋ’ ಧಾರವಾಹಿಯಲ್ಲಿ ಭಾರತೀಯರನ್ನು ಹಿಂದು ರಾಷ್ಟ್ರೀಯವಾದಿಗಳು ಎಂದು ಬಿಂಬಿಸಲಾಗಿತ್ತು
  • ಕ್ವಾಂಟಿಕೋ ಧಾರಾವಾಹಿಯಲ್ಲಿ ಪ್ರಿಯಾಂಕ ಚೋಪ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದರು

ಲಾಸ್‌ಏಂಜಲೀಸ್(ಜೂ.11): ಅಮೆರಿಕದ ‘ಕ್ವಾಂಟಿಕೋ’ ಧಾರವಾಹಿಯಲ್ಲಿ ಭಾರತದ ಹಿಂದೂ ರಾಷ್ಟ್ರೀಯವಾದಿಗಳನ್ನು ಉಗ್ರವಾದಿಗಳೆಂದು ಬಿಂಬಿಸಿದ್ದಕ್ಕೆ ಅಮೆರಿಕ ಟೆಲಿವಿಷನ್ ಸ್ಟುಡಿಯೋ ಭಾರತೀಯರ ಕ್ಷಮೆಯಾಚಿಸಿದ ಬೆನ್ನಲ್ಲೇ, ಇದೇ ಧಾರವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಬಾಲಿವುಟ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಕ್ಷಮೆ ಕೋರಿದ್ದಾರೆ.

‘ನಾನೋರ್ವ ಹೆಮ್ಮೆಯ ಭಾರತೀಯಳು. ಕ್ವಾಂಟಿಕೋ ಧಾರಾವಾಹಿ ಯಲ್ಲಿ ಭಾರತೀಯರನ್ನು ಉಗ್ರವಾದಿಗಳು ಎಂಬುದಾಗಿ ಬಿಂಬಿಸಿದ್ದಕ್ಕೆ ಅತೀವ ಬೇಸರವಾಗಿದೆ. ಇದಕ್ಕಾಗಿ ಕ್ಷಮೆಯಿರಲಿ. ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ,’ ಎಂದು ಬರೆದುಕೊಂಡಿದ್ದಾರೆ. ಧಾರಾವಾಹಿಯ ದೃಶ್ಯವೊಂದರಲ್ಲಿ ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹಿಂದೂ ರಾಷ್ಟ್ರೀಯ ವಾದಿಯೊಬ್ಬ, ಮ್ಯಾನ್ ಹಟನ್‌ನಲ್ಲಿ ಬಾಂಬ್ ಇಡುವ ದೃಶ್ಯ ತೋರಿಸಲಾಗಿತ್ತು.

loader