ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ತಾವು ಹಾಗೂ ತಮ್ಮ ಸಹೋದರಿ ಪ್ರಿಯಾಂಕ ಗಾಂಧಿ ಕ್ಷಮಿಸಿದ್ದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಸಿಂಗಾಪುರ: ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ತಾವು ಹಾಗೂ ತಮ್ಮ ಸಹೋದರಿ ಪ್ರಿಯಾಂಕ ಗಾಂಧಿ ಕ್ಷಮಿಸಿದ್ದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತಂದೆಯ ಹತ್ಯೆಗೆ ಕಾರಣ ಏನೇ ಇರಲಿ. ನಾವು ಯಾವುದೇ ಹಿಂಸೆಯನ್ನೂ ಕೂಡ ನಾವು ಸಮರ್ಥಿಸುವುದಿಲ್ಲ ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ. ಸಿಂಗಾಪುರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ತಮ್ಮ ತಂದೆ ಹಾಗೂ ತಮ್ಮ ಅಜ್ಜಿ ಇಬ್ಬರೂ ಕೂಡ ರಾಜಕೀಯದಲ್ಲಿರುವಾಗಲೇ ನಿಧನರಾದರು. ಈ ಘಟನೆಯಿಂದ ನಮಗೆ ಹೆಚ್ಚಿನ ನೋವುಂಟಾಗಿತ್ತು. ಆದರೆ ಇದೀಗ ಸಂಪೂರ್ಣವಾಗಿ ಕ್ಷಮಿಸಿದ್ದೇವೆ ಎಂದು ರಾಹುಲ್ ಹೇಳಿಕೆ ನೀಡಿದ್ದಾರೆ.