ಶನಿವಾರ ಪೂರ್ತಿ ತರಗತಿ ನಡೆಸುವುದರ ಮೂಲಕ ಬಂದ್'ನಿಂದಾದ ಶೈಕ್ಷಣಿಕ ನಷ್ಟವನ್ನು ಭರಿಸಲಾಗುವುದು

ಬೆಂಗಳೂರು(ಜ.23): ಜನವರಿ 25 ರಂದು ಮಹದಾಯಿ ಹೋರಾಟ ಬೆಂಬಲಿಸಿ ಕೇಂದ್ರ ಸರ್ಕಾರದ ಗಮನಹರಿಸಿವುದಕ್ಕಾಗಿ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಕರ್ನಾಟಕ ಬಂದ್' ದಿನದಂದು ಖಾಸಗಿ ಶಾಲೆಗಳಿಗೆ ರಜೆ ನೀಡಲು ಒಕ್ಕೂಟ ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಆಡಳಿತ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಡಿ. ಶಶಿಕುಮಾರ್ ತಿಳಿಸಿದ್ದಾರೆ.

ಸುರಕ್ಷಿತ ಹಾಗೂ ಭದ್ರತೆಯ ಉದ್ದೇಶದಿಂದ ಬಂದ್ ದಿನದಂದು ಶಾಲೆಗಳಿಗೆ ರಜೆ ನೀಡಲಿದ್ದು, ಶನಿವಾರ ಪೂರ್ತಿ ತರಗತಿ ನಡೆಸುವುದರ ಮೂಲಕ ಬಂದ್'ನಿಂದಾದ ಶೈಕ್ಷಣಿಕ ನಷ್ಟವನ್ನು ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.