ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆವ ಅವಕಾಶಕ್ಕೆ ಶಿಫಾರಸು

First Published 1, May 2018, 9:00 AM IST
Privilege to Engineering Students
Highlights

ಪರೀಕ್ಷಾ ಸುಧಾರಣೆ ಭಾಗವಾಗಿ ಇಂಜಿನಿಯರಿಂಗ್ ಕಾರ್ಯಕ್ರಮಗಳಿಗಾಗಿ ‘ತೆರೆದ ಪುಸ್ತಕದ ಪರೀಕ್ಷೆ’ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯೊಂದು ಶಿಫಾರಸು ಮಾಡಿದೆ. ತೆರೆದ ಪುಸ್ತಕ ಪರೀಕ್ಷೆ ನಡೆಸುವಂತೆ ಶಿಫಾರಸು ಕುರಿತಾದ ಸಮಿತಿಯ ವರದಿಯನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ ಚಿಂತಿಸಿದೆ. 

ನವದೆಹಲಿ (ಮೇ.01): ಪರೀಕ್ಷಾ ಸುಧಾರಣೆ ಭಾಗವಾಗಿ ಇಂಜಿನಿಯರಿಂಗ್ ಕಾರ್ಯಕ್ರಮಗಳಿಗಾಗಿ ‘ತೆರೆದ ಪುಸ್ತಕದ ಪರೀಕ್ಷೆ’ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯೊಂದು ಶಿಫಾರಸು ಮಾಡಿದೆ. ತೆರೆದ ಪುಸ್ತಕ ಪರೀಕ್ಷೆ ನಡೆಸುವಂತೆ ಶಿಫಾರಸು ಕುರಿತಾದ ಸಮಿತಿಯ ವರದಿಯನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ ಚಿಂತಿಸಿದೆ. 

ಈ ಕ್ರಮ ಜಾರಿಗೊಂಡಲ್ಲಿ, ಪರೀಕ್ಷಾ ಕೊಠಡಿಗಳಿಗೆ ವಿದ್ಯಾರ್ಥಿಗಳು ನೋಟ್ ಪುಸ್ತಕಗಳು, ಓದುವ ಪುಸ್ತಕ ಮತ್ತು ಇತರೆ ಮಾಹಿತಿ ಗಳನ್ನೊಳಗೊಂಡ ಸಾಮಗ್ರಿಗಳನ್ನು ತರಬಹುದಾಗಿದೆ. ಪರೀಕ್ಷಾ ಸುಧಾರಣೆ ಗಾಗಿ ಎಐಸಿಟಿಇ ಸಮಿತಿಯೊಂದನ್ನು ನೇಮಿಸಿತ್ತು. ಇಂಜಿನಿಯ ರಿಂಗ್ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೆ ಪತ್ರಿಕೆಗಳು ಮತ್ತು ಕಲಿಕೆ ಗುಣಮಟ್ಟಗಳು ಹೆಚ್ಚಿನ ಸಮಯಾವಕಾ ತೆಗೆದುಕೊಳ್ಳುತ್ತದೆ ಎಂಬುದು ಗಂಭೀರ ವಿಚಾರ ಎಂದು ವರದಿಯಲ್ಲಿ ತಿಳಿಸಲಾಗಿದೆ. 

loader