ಎಚ್ಚರ : ಇಂದು ನಿಮಗೆ ಸಿಗುವುದಿಲ್ಲ ಖಾಸಗಿ ಆಸ್ಪತ್ರೆ ವೈದ್ಯರು

First Published 28, Jul 2018, 8:11 AM IST
Private hospitals to shut OPDs Today
Highlights

ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಂಡಿಸಲು ಮುಂದಾಗಿರುವ ಭಾರತೀಯ ವೈದ್ಯಕೀಯ ಪರಿಷತ್‌ನ ತಿದ್ದುಪಡಿ ವಿಧೇಯಕ  ವಿರೋಧಿಸಿ ಖಾಸಗಿ ವೈದ್ಯರು ಇಂದು ದೇಶಾದ್ಯಂತ ಹೊರ ರೋಗಿ ಸೇವೆ (ಒಪಿಡಿ) ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ. ಪರಿಣಾಮ ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿರುವುದಿಲ್ಲ.
 

ಬೆಂಗಳೂರು: ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಂಡಿಸಲು ಮುಂದಾಗಿರುವ ಭಾರತೀಯ ವೈದ್ಯಕೀಯ ಪರಿಷತ್‌ನ ತಿದ್ದುಪಡಿ ವಿಧೇಯಕ  ವಿರೋಧಿಸಿ ಖಾಸಗಿ ವೈದ್ಯರು ಇಂದು ದೇಶಾದ್ಯಂತ ಹೊರ ರೋಗಿ ಸೇವೆ (ಒಪಿಡಿ) ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದಾರೆ. ಪರಿಣಾಮ ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿರುವುದಿಲ್ಲ.

 ಹೀಗಾಗಿ ಇಂದು ಹೊರ ರೋಗಿ ಸೇವೆ ಪಡೆ ಯಬೇಕಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದು. ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾಗಲಿರುವ ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆ ನೀಡಲು ಆರೋಗ್ಯ ಇಲಾಖೆಯು ವೈದ್ಯಾಧಿಕಾರಿಗಳಿಗೆ ಆದೇಶ ಮಾಡಿದೆ. 

ವಿರೋಧ ಏಕೆ?: ಕೇಂದ್ರ ಸರ್ಕಾರವು ಭಾರತೀಯ ವೈದ್ಯಕೀಯ ಪರಿಷತ್ ಕಾಯ್ದೆಗೆ ಕೆಲ ತಿದ್ದುಪಡಿ ತರಲು 2016 ರಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿತ್ತು.  ಈ ವೇಳೆ ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಲಾ ಗುತ್ತಿದ್ದು, ತಿದ್ದುಪಡಿಯಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಮರೀಚಿಕೆಯಾಗಲಿದೆ.

ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯಗಳು ಅಧಿಕಾರ ಕಳೆದುಕೊಳ್ಳಲಿವೆ. ಹೀಗಾಗಿ ಮರು ಪರಿಶೀಲಿಸುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಿಸಿತ್ತು. ಆದರೂ, ಯಾವುದೇ ಪರಿಷ್ಕರಣೆ ಇಲ್ಲದೆ ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿದೆ. ಹೀಗಾಗಿ ಐಎಂಎ ದೇಶಾದ್ಯಂತ ಶನಿವಾರ ಒಂದು ದಿನ ಹೊರ ರೋಗಿ ಸೇವೆ ಬಂದ್ ಮಾಡುವಂತೆ ಕರೆ ನೀಡಿದರು. 

ಈ ಹಿನ್ನೆಲೆಯಲ್ಲಿ ಐಎಂಎ ರಾಜ್ಯಾಧ್ಯಕ್ಷ  ಡಾ.ಎಚ್.ಎನ್. ರವೀಂದ್ರ, ರಾಜ್ಯದಲ್ಲಿ ಎಲ್ಲಾಖಾಸಗಿ ಆಸ್ಪತ್ರೆಗಳಲ್ಲೂ ಶನಿವಾರ ಒಂದು ದಿನ  ಹೊರ ರೋಗಿ ಸೇವೆ ಲಭ್ಯವಿರುವುದಿಲ್ಲ. ಆದರೆ, ತುರ್ತು ಸೇವೆ ಹಾಗೂ ಒಳರೋಗಿ ಸೇವೆಗೆ ವ್ಯತ್ಯಯ ಇರುವುದಿಲ್ಲ ಎಂದಿದ್ದಾರೆ. ದೇಶಾದ್ಯಂತ 2.5 ಲಕ್ಷ ಮಂದಿ ವೈದ್ಯರು ಐಎಂಎ ಸದ್ಯರಾಗಿದ್ದಾರೆ. ರಾಜ್ಯದಲ್ಲಿ 27 ಸಾವಿರ ಮಂದಿ ಸದಸ್ಯರಿದ್ದು, ಅಷ್ಟೂ ಮಂದಿ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಹೊರ ರೋಗಿ ಸೇವೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಕೆಲ ಖಾಸಗಿ ಒಪಿಡಿ ಓಪನ್: ಇನ್ನು ನಗರದ ಕೆಲ ಆಸ್ಪತ್ರೆಗಳು ಮುಷ್ಕರ ಕುರಿತು ಯಾವುದೇ ಮಾಹಿತಿ ಇಲ್ಲದ ಕಾರಣ ಒಪಿಡಿ ಬಂದ್ ಮಾಡುತ್ತಿಲ್ಲ ಎಂದು ಕೆಲ ಖಾಸಗಿ ಆಸ್ಪತ್ರೆಗಳು ಹೇಳಿವೆ. ಹೀಗಾಗಿ ಕೆಲ ಆಸ್ಪತ್ರೆಗಳಲ್ಲಿ ಸೇವೆ ಎಂದಿನಿಂತೆ ಮುಂದು ವರಿಯಲಿದೆ. ಖಾಸಗಿ ವೈದ್ಯರ ಪ್ರತಿಭಟನೆ ಒಪಿಡಿಗೆ ಮಾತ್ರ ಸೀಮಿತ ಇದ್ದರೂ, ಕೆಲವೆಡೆ ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನು ಗಮನಿಸಿ ರೋಗಿಗಳು ಅಲ್ಲಿಗೆ ತೆರಳುವ ಮುನ್ನ ದೂರವಾಣಿ ಕರೆ ಮಾಡಿ ಆಸ್ಪತ್ರೆ ತೆರೆದಿರುವುದನ್ನು ಖಚಿತ ಪಡಿಸಿಕೊಂಡು ದುವರಿಯಬಹುದು.

ತುರ್ತು ಪ್ರಕರಣಗಳಿದ್ದಲ್ಲಿ ಸಮೀಪದ ಸರಕಾರಿ ಅಥವಾ ಪಾಲಿಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯ ಬಹುದು. ಕ್ಷ-ಕಿರಣ ಸಹಿತ ಲ್ಯಾಬ್ ಟೆಸ್ಟ್‌ಗೆ ಸಮಯ ನಿಗದಿ ಆಗಿದ್ದಲ್ಲಿ ಮೊದಲೇ ಖಾತರಿ ಪಡಿಸಿಕೊಳ್ಳುವುದು ಉತ್ತಮ. 

loader