ಬೆಂಗಳೂರಿನಿಂದ ಹೊರ ರಾಜ್ಯ ಸೇರಿದಂತೆ ಬೇರೆ ಬೇರೆ  ನಗರಗಳಿಗೆ ಖಾಸಗಿ  ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ ಸಾವಿರಾರೂ ರೂಪಾಯಿ ಹಣವನ್ನು ಟಿಕೆಟ್'​ಗೆ  ವೆಚ್ಚಮಾಡಬೇಕು.

ಬೆಂಗಳೂರು(ಅ. 26): ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ರಜೆಯಲ್ಲಿ ಊರಿಗೆ, ಪ್ರವಾಸಕ್ಕೆಂದು ಹೋಗುವವರ ಸಂಖ್ಯೆ ಹೆಚ್ಚಾಗಿರುವಾಗ ಅದರ ಲಾಭವನ್ನು ಖಾಸಗಿ ಬಸ್ಸುಗಳ ನಿರ್ವಾಹಕರು ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಇದೇ ಕಥೆ. ಹಬ್ಬಗಳು, ಸರ್ಕಾರಿ ರಜೆ ಬಂದ್ರೆ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಖಾಸಗಿ ಬಸ್​ ಮಾಲೀಕರು ಹಣ ಕಿತ್ತುಕೊಳ್ಳೊಕ್ಕೆ ಪ್ರಾರಂಭಿಸುತ್ತಾರೆ. ಬೆಂಗಳೂರಿನಿಂದ ಹೊರ ರಾಜ್ಯ ಸೇರಿದಂತೆ ಬೇರೆ ಬೇರೆ ನಗರಗಳಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಬೇಕೆಂದರೆ ಸಾವಿರಾರೂ ರೂಪಾಯಿ ಹಣವನ್ನು ಟಿಕೆಟ್'​ಗೆ ವೆಚ್ಚಮಾಡಬೇಕು. ಹಬ್ಬದ ಪ್ರಯುಕ್ತ ಊರಿಗೆ ಹೋಗುವ ಅನಿವಾರ್ಯತೆ ಇರುವ ಪ್ರಯಾಣಿಕರು ಡಬ್ಬಲ್​​ ದುಡ್ಡು ಕೊಟ್ಟು ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಸಾಮಾನ್ಯ ದಿನದ ದರಕ್ಕಿಂತ ಎರಡು ಪಟ್ಟು ಹೆಚ್ಚಳ..!

ಬಸ್ ಮಾರ್ಗನಿತ್ಯದ ದರ (ರೂಗಳಲ್ಲಿ)ಹಬ್ಬಕ್ಕೆ ಹೆಚ್ಚಿದ ದರ (ರೂಗಳಲ್ಲಿ)
ಬೆಂಗಳೂರು - ಹುಬ್ಬಳ್ಳಿ7001200
ಬೆಂಗಳೂರು - ಮಂಗಳೂರು5501200
ಬೆಂಗಳೂರು - ಹೈದರಾಬಾದ್9002200
ಬೆಂಗಳೂರು - ಬೀದರ್10002000
ಬೆಂಗಳೂರು - ಶಿವಮೊಗ್ಗ7001100
ಬೆಂಗಳೂರು - ವಿಜಯಪುರ8501495

 ಇದೇ ವೇಳೆ, ಈ ಬಾರಿ ಕೆಎಸ್ಸಾರ್ಟಿಸಿ ನಿಗಮವು ಹಬ್ಬದ ಪ್ರಯುಕ್ತ 1500 ವಿಶೇಷ ಬಸ್'​ಗಳನ್ನ ಬಿಟ್ಟಿದ್ದಾರೆ. ಇವು ಪ್ರಯಾಣಿಕರ ನೆರವಿಗೆ ಬರಬಲ್ಲುದಾ ಎಂಬುದನ್ನು ಕಾದುನೋಡಬೇಕು.

ವರದಿ: ಮತ್ತಪ್ಪ ಲಮಾಣಿ, ಸುವರ್ಣನ್ಯೂಸ್