ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್​ ವಶಕ್ಕೆ ನೀಡಲಾಗಿದೆ. ಈಗಾಗಲೇ ವಜೀರ್, ಮುಜೀಬ್​​, ವಾಸಿಮ್​, ಇರ್ಫಾನ್​ ಪಾಷಾ ಎಂಬ ನಾಲ್ವರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಬೆಂಗಳೂರು (ನ.03): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬೆಂಗಳೂರು ನಗರ ಜಿಲ್ಲಾಧ್ಯಕ್ಷನಾಗಿರುವ ಆಸೀಮ್ ಷರೀಫ್ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದೆನ್ನಲಾಗಿದ್ದು, ನಿನ್ನೆ ರಾತ್ರಿಯೇ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್​ ವಶಕ್ಕೆ ನೀಡಲಾಗಿದೆ. ಈಗಾಗಲೇ ವಜೀರ್, ಮುಜೀಬ್​​, ವಾಸಿಮ್​, ಇರ್ಫಾನ್​ ಪಾಷಾ ಎಂಬ ನಾಲ್ವರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ರುದ್ರೇಶ್​ ಹತ್ಯೆ ಬಳಿಕ ಆಸೀಮ್​ ಷರೀಫ್​​ ಕೇರಳಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ. ಪ್ರಕರಣದ ಜಾಡು ಹಿಡಿದ ಪೊಲಿಸರು ಕೊನೆಗೂ ಎಡೆಮುರಿ ಕಟ್ಟಿದ್ದಾರೆ. ಅಕ್ಟೋಬರ್ 16ರಂದು ಹಾಡುಹಗಲೇ ರುದ್ರೇಶ್ ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು​