ಪ್ರಧಾನಿ ಮೋದಿ ಮೆಟ್ರೋ ಪ್ರಯಾಣ! ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆ! ಮೆಟ್ರೋದಲ್ಲಿ ಮೋದಿ ಕಂಡು ಖುಷಿಪಟ್ಟ ಜನತೆ
ನವದೆಹಲಿ(ಸೆ.20): ಪ್ರಧಾನಿ ನರೇಂದ್ರ ಮೋದಿ ಇಂದು ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆಗೆ ಮೆಟ್ರೋದಲ್ಲಿ ತೆರಳಿದರು. ಈ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ನಡೆಸಿದರು.
ಮೆಟ್ರೋದಲ್ಲಿ ಏಕಾಏಕಿ ಪ್ರಧಾನಿ ಅವರನ್ನು ಕಂಡು ಸಹ ಪ್ರಯಾಣಿಕರು ಖುಷಿ ಪಟ್ಟರು. ಈ ವೇಳೆ ಕೆಲವರು ಪ್ರಧಾನಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಒಟ್ಟು 14 ನಿಮಿಷಗಳ ಕಾಲ ಮೆಟ್ರೋದಲ್ಲಿ ಪ್ರಯಾಣ ಮಾಡಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

