ದೇವ್ರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋದು ಹಳೇ ಗಾದೆ. ಭಕ್ತ ದೇಣಿಗೆ ಕೊಟ್ರೂ ಪೂಜಾರಿ ದೇವರಿಗೆ ಕೊಡಲಿಲ್ಲ ಎಂಬ ಹೊಸ ಗಾದೆ ಸೇರ್ಪಡೆ ಮಾಡಬೇಕಾದ ಸನ್ನಿವೇಶವನ್ನು ಇಲ್ಲೊಬ್ಬ ಪೂಜಾರಿ ಸೃಷ್ಟಿಸಿದ್ದಾರೆ.

ಕಲಬುರಗಿ: ದೇವ್ರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನೋದು ಹಳೇ ಗಾದೆ. ಭಕ್ತ ದೇಣಿಗೆ ಕೊಟ್ರೂ ಪೂಜಾರಿ ದೇವರಿಗೆ ಕೊಡಲಿಲ್ಲ ಎಂಬ ಹೊಸ ಗಾದೆ ಸೇರ್ಪಡೆ ಮಾಡಬೇಕಾದ ಸನ್ನಿವೇಶವನ್ನು ಇಲ್ಲೊಬ್ಬ ಪೂಜಾರಿ ಸೃಷ್ಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿಯಲ್ಲೊಬ ಪೂಜಾರಿ, ಭಕ್ತರು ಹುಂಡಿಗೆ ಹಾಕಿದ ಹಣ ಎಣಿಕೆ ಸಂದರ್ಭದಲ್ಲಿ ಒಂದಿಷ್ಟು ಹಣ ದೇವರಿಗೂ ಕಾಣದಂತೆ ತನ್ನ ಜೇಬಿಗೆ ಹಾಕಿಕೊಂಡಿದ್ದಾನೆ. ಆದ್ರೆ, ದೇವರಿಗೆ ಕಾಣದ ಪೂಜಾರಿ ಕೈಚಳಕ ಸಿಸಿಟಿವಿ ಕ್ಯಾಮರಾ ಕಣ್ಣಿಗೆ ಕಂಡಿದೆ.

ಅಂದಹಾಗೇ ಇದಾಗಿದ್ದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ. ದೇವಸ್ಥಾನದ ಹುಂಡಿ ಹಣ ಎಣಿಸುವ ವೇಳೆ ದೇವಸ್ಥಾನದ ಸಮಿತಿಯ ಸದಸ್ಯನು ಆಗಿರುವ ಪೂಜಾರಿ ಈ ಮೋಸದಾಟ ಆಡಿದ್ದಾನೆ.