ಕೊಯಮತ್ತೂರು[ಸೆ.21]: ತಮ್ಮ ಸುರಕ್ಷತೆಯನ್ನು ಲೆಕ್ಕಿಸದ ದೇವಸ್ಥಾನದ ಅರ್ಚಕರೊಬ್ಬರು ಹಾವು ಕಚ್ಚುತ್ತಿದ್ದರೂ ಅದನ್ನು ಹಿಡಿದು ಮಕ್ಕಳನ್ನು ಪಾರುಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮೋಹನ್‌ ಆ ಧೈರ್ಯಶಾಲಿ. 20 ಮಕ್ಕಳಿದ್ದ ಅಂಗನವಾಡಿಯೊಂದರಲ್ಲಿ ಹಾವು ಕಾಣಿಸಿಕೊಂಡು ಭೀತಿ ಹುಟ್ಟಿಸಿತ್ತು. ಚಾವಣಿ ಮೇಲೆ ಹಾವು ಕಂಡ ಮಕ್ಕಳು ಕಿರುಚಾಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ದೇವಸ್ಥಾನದ ಅರ್ಚಕ ಮೋಹನ್‌ ಓಡಿಬಂದು ಹಾವನ್ನು ಹಿಡಿದಿದ್ದಾರೆ.

ಈ ವೇಳೆ ಹಾವು ಅವರಿಗೆ ಕಚ್ಚಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಈ ವೇಳೆ ವಿಷಕಾರಿ ಹಾವಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಿಸಿದ್ದಾರೆ.