ಬೆಂಗಳೂರು [ಸೆ.15]: ರಾಜ್ಯದಲ್ಲಿ ಮುಂದಿನ ಆರು ತಿಂಗಳಲ್ಲಿ ರಾಜ್ಯಪಾಲರ ಆಡಳಿತ ಎದುರಾಗಲಿದ್ದು, ನಂತರ ಚುನಾವಣೆ ನಡೆಯಲಿದೆ ಎಂದು ಸ್ವಾತಂತ್ರ್ಯ ಹೋರಾಟ ಡಾ.ಎಚ್‌.ಎಸ್‌ ದೊರೆಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.

ಟಿಪು ಸುಲ್ತಾನ್‌ ಸಂಯುಕ್ತ ರಂಗ (ಟಿಯುಎಫ್‌ಎಫ್‌)  ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ದಿ. ಎ.ಕೆ. ಸುಬ್ಬಯ್ಯ ಅವರಿಗೆ ‘ಶ್ರದ್ಧಾಂಜಲಿ ಸಲ್ಲಿಕೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳನ್ನು ನಾಶಮಾಡುವ ಮೂಲಕ ಬಿಜೆಪಿ ಅತಿಕ್ರಮಣ ಧೋರಣೆ ತಾಳಿದೆ. ಇದರಿಂದ ರಾಜ್ಯದಲ್ಲಿ ಪ್ರತಿಸ್ಪರ್ಧಿ ನಾಯಕರೇ ಇಲ್ಲದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಬಿಜೆಪಿಯ ನಿಲುವಿಗೆ ಮಣಿಯದೇ ಅವರ ವಿರುದ್ಧ ಎಲ್ಲರೂ ಸಂಘಟಿತರಾಗಿ ಚುನಾವಣೆಗೂ ಮುನ್ನವೇ ಹೋರಾಡಬೇಕಿದೆ. ಪ್ರಜಾಪ್ರಭುತ್ವಕ್ಕೆ ಪೂರಕ ಫಲಿತಾಂಶ ಪಡೆಯಬೇಕಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟಿಯುಎಫ್‌ಎಫ್‌ ಉಪಾಧ್ಯಕ್ಷ ಪ್ರೊ. ಎನ್‌.ವಿ ನರಸಿಂಹಯ್ಯ, ಕೆಎಸ್‌ಎಸ್‌ಡಿ ಅಧ್ಯಕ್ಷ ಚನ್ನಕೃಷ್ಣಪ್ಪ ,ಜೆಡಿಎಸ್‌ ಮುಖಂಡ ಸೈಯದ್‌ ಶಫಿವುಲ್ಲಾ, ದಲತಿ ಮತ್ತು ಮೈನಾರಿಟಿ ಸೇನೆ ಅಧ್ಯಕ್ಷ ಎ.ಜೆ.ಖಾನ್‌, ಜನತಾರಂಗದ ಸಿ.ಕೆ ರವಿಚಂದ್ರ ಇದ್ದರು.