Asianet Suvarna News Asianet Suvarna News

ಭಾರತದ ಪ್ರಥಮ ಪ್ರಜೆ ಯಾರು: ಇಂದು ಸಂಜೆ 5ಕ್ಕೆ ಬಹಿರಂಗ

ಬಳಿಕ ರಾಜ್ಯಗಳ ಇಂಗ್ಲಿಷ್ ವರ್ಣಮಾಲೆಯ ಆರಂಭದ ಅಕ್ಷರ ಆಧರಿಸಿ ಮತ ಎಣಿಕೆ ನಡೆಯಲಿದೆ. ಒಟ್ಟು 8 ಸುತ್ತಿನ ಮತ ಎಣಿಕೆ ಇದ್ದು, ಪ್ರತಿ ಸುತ್ತಿನ ಮುನ್ನಡೆ-ಹಿನ್ನಡೆಗಳನ್ನೂ ಬಹಿರಂಗಪಡಿಸಲಾಗುತ್ತದೆ. ಸಂಜೆ 5ರ ಸುಮಾರಿಗೆ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾಧಿಕಾರಿಯೂ ಆದ ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ತಿಳಿಸಿದ್ದಾರೆ.

Presidential election Heres what you need to know about

ನವದೆಹಲಿ(ಜು.19): ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ೧೧ ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು,  ಸಂಜೆ 5 ಗಂಟೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.

ಮೇಲ್ನೋಟಕ್ಕೆ ಕಂಡಂತೆ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಅವರು ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಸಾಕಷ್ಟು ಮುಂದಿದ್ದು, ಜಯ ನಿಚ್ಚಳ ಎಂದು ಭಾವಿಸಲಾಗಿದೆ. ಒಟ್ಟು 4 ಟೇಬಲ್‌ಗಳನ್ನು ಸ್ಥಾಪಿಸಲಾಗಿದ್ದು, ಮೊದಲು ಸಂಸತ್ ಭವನದ ಮತಗಟ್ಟೆಯ, ಮತಗಳ ಎಣಿಕೆ ನಡೆಯಲಿದೆ. ಬಳಿಕ ರಾಜ್ಯಗಳ ಇಂಗ್ಲಿಷ್ ವರ್ಣಮಾಲೆಯ ಆರಂಭದ ಅಕ್ಷರ ಆಧರಿಸಿ ಮತ ಎಣಿಕೆ ನಡೆಯಲಿದೆ. ಒಟ್ಟು 8 ಸುತ್ತಿನ ಮತ ಎಣಿಕೆ ಇದ್ದು, ಪ್ರತಿ ಸುತ್ತಿನ ಮುನ್ನಡೆ-ಹಿನ್ನಡೆಗಳನ್ನೂ ಬಹಿರಂಗಪಡಿಸಲಾಗುತ್ತದೆ. ಸಂಜೆ 5ರ ಸುಮಾರಿಗೆ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾಧಿಕಾರಿಯೂ ಆದ ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ತಿಳಿಸಿದ್ದಾರೆ.

ಶೇ.99 ದಾಖಲೆಯ ಮತದಾನ

ಶೇ.99ರಷ್ಟು ದಾಖಲೆಯ ಮತದಾನ ಈ ಸಲ ನಡೆದಿದೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಅರ್ಹರಿರುತ್ತಾರೆ. ಆಯಾ ರಾಜ್ಯಗಳ ಜನಸಂಖ್ಯೆ ಆಧರಿಸಿ ಪ್ರತಿ ಮತದ ಮೌಲ್ಯ ನಿರ್ಧಾರವಾಗುತ್ತದೆ. ಇನ್ನು ಸಂಸದರ 1 ಮತಕ್ಕೆ 708 ಮತಗಳ ಮೌಲ್ಯ ಇರುತ್ತದೆ.

ಈ ಸಲ ಅರ್ಹ 771 ಸಂಸದರಲ್ಲಿ 768 ಸಂಸದರು ಮತ ಹಾಕಿದ್ದರು. ಇನ್ನು ಅರ್ಹ 4109 ಶಾಸಕರಲ್ಲಿ 4083 ಶಾಸಕರು ಮತ ಚಲಾಯಿಸಿದ್ದರು. ಅಂದಾಜಿನ ಪ್ರಕಾರ ರಾಮನಾಥ ಕೋವಿಂದ್ ಶೇ.63 ಸದಸ್ಯರ ಬೆಂಬಲ ಹೊಂದಿದ್ದು, ಜಯ ನಿಶ್ಚಿತವಾಗಿದೆ.

25ಕ್ಕೆ ಪ್ರಮಾಣ: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದೆ. ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Follow Us:
Download App:
  • android
  • ios