ವಿಧಾನಸೌಧಧ ವಜ್ರ ಮಹೋತ್ಸವದಲ್ಲಿ ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪು ಹೆಸರನ್ನು ಬಳಸಿದ್ದು ಇದೀಗ ವಿವಾದದ ಸ್ವರೂಪ ಪಡೆದುಕೊಳ್ತಾ ಇದೆ. ಆಡಳಿತಾರೂಡ ಕಾಂಗ್ರೆಸ್ ಇದನ್ನು ಸಮರ್ಥನೆ ಮಾಡಿಕೊಂಡರೆ, ಅತ್ತ ಬಿಜೆಪಿ ಅನ್ನಲೂ ಆಗದೆ ಅನುಭವಿಸಲೂ ಆಗದೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಸ್ಥಿತಿಯಲ್ಲಿದೆ.
ಬೆಂಗಳೂರು (ಅ.25): ವಿಧಾನಸೌಧಧ ವಜ್ರ ಮಹೋತ್ಸವದಲ್ಲಿ ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪು ಹೆಸರನ್ನು ಬಳಸಿದ್ದು ಇದೀಗ ವಿವಾದದ ಸ್ವರೂಪ ಪಡೆದುಕೊಳ್ತಾ ಇದೆ. ಆಡಳಿತಾರೂಡ ಕಾಂಗ್ರೆಸ್ ಇದನ್ನು ಸಮರ್ಥನೆ ಮಾಡಿಕೊಂಡರೆ, ಅತ್ತ ಬಿಜೆಪಿ ಅನ್ನಲೂ ಆಗದೆ ಅನುಭವಿಸಲೂ ಆಗದೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಸ್ಥಿತಿಯಲ್ಲಿದೆ.
ಆರಂಭದಿಂದಲೂ ಒಂದಲ್ಲಾ ಒಂದು ವಿವಾದಗಳನ್ನು ಸೃಷ್ಟಿಸುತ್ತಲೇ ಬಂದ ವಿಧಾನಸೌಧದ ವಜ್ರ ಮಹೋತ್ಸವ ರಾಷ್ಟ್ರಪತಿಗಳ ಭಾಷಣದಲ್ಲಿ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡುವ ವೇಳೆ ಟಿಪ್ಪು ಸುಲ್ತಾನ್ ಒಬ್ಬ ವೀರಯೊಧ. ಕ್ಷಿಪಣಿ ತಂತ್ರಜ್ಷಾನ ಕಂಡು ಹಿಡಿದ ಮಹಾನುಭಾವ ಅಂತಾ ಹೊಗಳಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಟಿಪ್ಪು ಜಯಂತಿ ಯ ವಿವಾದದ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿಯವರೇ ಆರಿಸಿ ಕಳಿಸಿದ ರಾಷ್ಟ್ರಪತಿಗಳ ಬಾಯಲ್ಲಿ ಟಿಪ್ಪುವಿನ ಗುಣಗಾನ ಕೇಳಿ ಅಡಕತ್ತರಿಯಲ್ಲಿ ಸಿಲುಕಿಕೊಂಡ ಪರಿಸ್ಥಿತಿ ಬಿಜೆಪಿಯದ್ದು.
ಟಿಪ್ಪು ಜಯಂತಿ ಬೇಕಾ ಬೇಡವಾ ಅಂತಾ ರಾಜ್ಯದೆಲ್ಲೆಡೆ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಬಾಯಲ್ಲಿ ಟಿಪ್ಪು ವಿನ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದು ಸದ್ಯ ಬಿಜೆಪಿ ಗೆ ಇಕ್ಕಟ್ಟಿನ ಸ್ಥಿತಿ ತಂದು ಒಡ್ಡಿದೆ. ಇದೆಲ್ಲಾ ಸರ್ಕಾರದ್ದೇ ಕುತಂತ್ರ ಅಂತಾ ಕಿಡಿಕಿಡಿಯಾಗಿರುವ ಬಿಜೆಪಿಯ ನಾಯಕರು ರಾಷ್ಟ್ರಪತಿ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದೆ ಅಂತಾ ಕಿಡಿಕಿಡಿಯಾಗಿದ್ದಾರೆ.
ಒಟ್ಟಿನಲ್ಲಿ ಟಿಪ್ಪು ಜಯಂತಿಯ ವಿವಾದ ಕಾವೇರುತ್ತಿರುವ ಇಂಥಾ ವೇಳೆಯಲ್ಲಿಯೇ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಡಿದ ಭಾಷಣ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ರಾಷ್ಟ್ರಪತಿಗಳ ಮಾತು ಆಡಳಿತಾರೂಢ ಕಾಂಗ್ರೆಸ್ ಹಿರಿಹಿರಿ ಹಿಗ್ಗುವಂತೆ ಮಾಡಿದರೆ ಅತ್ತ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿಕೊಂಡ ಪರಿಸ್ಥಿತಿಯಲ್ಲಿದೆ.
