ಶತಮಾನದ ಮಹಾಮಳೆಗೆ ತತ್ತರಿಸಿದ ಕೊಡಗು! ಕನ್ನಡದಲ್ಲಿ ಟ್ವೀಟ್ ಮಾಡಿದ ರಾಷ್ಟ್ರಪತಿ ಕೋವಿಂದ್! ಕೊಡಗು ಜನರೊಂದಿಗೆ ದೇಶ ಇರುವುದಾಗಿ ಟ್ವೀಟ್! ಕೊಡಗು ಜನರ ಧೈರ್ಯ ಮೆಚ್ಚಿಕೊಂಡ ರಾಷ್ಟ್ರಪತಿ!ಪರಿಹಾರ ಕಾರ್ಯಾಚರಣೆ ತೃಪ್ತಿ ತಂದಿದೆ ಎಂದ ಕೋವಿಂದ್

ನವದೆಹಲಿ(ಆ.20): ಶತಮಾನದ ಮಹಾಮಳೆಗೆ ತತ್ತರಿಸಿರುವ ಕೊಡಗಿನ ಜನರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧೈರ್ಯ ತುಂಬಿದ್ದು, ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಕೊಡಗಿನ ಜನರ ಜೊತೆ ತಾವಿರುವುದಾಗಿ ತಿಳಿಸಿದ್ದಾರೆ.

Scroll to load tweet…

ಕನ್ನಡದಲ್ಲಿ ಟ್ವೀಟ್ ಮಾಡಿರುವ ಕೋವಿಂದ್, ಈಗಾಗಲೇ ತಾವು ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಜಲಪ್ರಳಯಕ್ಕೆ ಎದೆಯೊಡ್ಡಿರುವ ಕೊಡಗು ಜನರ ಧೈರ್ಯವನ್ನು ರಾಷ್ಟ್ರಪತಿ ಕೊಂಡಾಡಿದ್ದಾರೆ.

Scroll to load tweet…

ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಇಡೀ ದೇಶ ಕೊಡಗು ಜನರೊಂದಿಗೆ ಇದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಪರಿಹಾರ ಕಾರ್ಯಾಚರಣೆ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.

Scroll to load tweet…

ವಿಪತ್ತು ನಿರ್ವಹಣಾ ಸಿಬ್ಬಂದಿ, ಸಾರ್ವಜನಿಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಚುರುಕಿನ ಕಾರ್ಯಾಚರಣೆಗೆ ರಾಷ್ಟ್ರಪತಿ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.