ಫೇಸ್'ಬುಕ್'ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಂ 2 ಭಾರತೀಯ

First Published 21, Jan 2018, 9:52 AM IST
President Ramnath Kovind no 2 Indian in facebook
Highlights

ರಾಮನಾಥ್ ಕೋವಿಂದ್  ರಾಷ್ಟ್ರಪತಿಯಾದ 6 ತಿಂಗಳ ಅವಧಿಯಲ್ಲೇ  ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ನವದೆಹಲಿ (ಜ.21): ರಾಮನಾಥ್ ಕೋವಿಂದ್  ರಾಷ್ಟ್ರಪತಿಯಾದ 6 ತಿಂಗಳ ಅವಧಿಯಲ್ಲೇ  ಸಾಮಾಜಿಕ ಜಾಲತಾಣಗಳಲ್ಲಿ ಅವರ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಟ್ವಿಟರ್‌ನಲ್ಲಿ ಕೋವಿಂದ್ ಅವರ ಹಿಂಬಾಲಕರ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗಿದೆ. ಅದೇ ರೀತಿ ಫೇಸ್'ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಎರಡನೇ ಜನಪ್ರಿಯ ವ್ಯಕ್ತಿ ಎನಿಸಿದ್ದಾರೆ.

ರಾಷ್ಟ್ರಪತಿ ಕಚೇರಿಯಲ್ಲಿ ಕೋವಿಂದ್ ಅವರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುತ್ತಿರುವ ವಿಶೇಷ ತಂಡ ಈ ಯಶಸ್ಸಿನ ಹಿಂದೆ ಕಾರ್ಯನಿರ್ವಸುತ್ತಿದೆ. ಇತ್ತೀಚೆಗಷ್ಟೇ ಈ ತಂಡವನ್ನು ರಚಿಸಲಾಗಿದ್ದು, ವಿವಿಧ ಆಸಕ್ತಿದಾಯಕ ವಿಷಯಗಳನ್ನುಅಪ್‌ಲೋಡ್ ಮಾಡಲಾಗುತ್ತಿದೆ.

 

loader