Asianet Suvarna News Asianet Suvarna News

ನೂತನ ರಾಷ್ಟ್ರಪತಿಯ ಪುತ್ರಿ ಗಗನಸಖಿ: ಸರಳತೆಯೇ ಈಕೆಯ ಜೀವನಶೈಲಿ

ರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದಾರೆ. ಆಸ್ಟ್ರೇಲಿಯಾ, ಯೂರೋಪ್, ಅಮೆರಿಕಾ ದೇಶಗಳಿಗೆ ಬೋಯಿಂಗ್ 777, 787 ವಿಮಾನಗಳಲ್ಲಿ ಸ್ವಾತಿ ಏರ್ ಹೋಸ್ಟೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

President ramnath kovind air hostess daughter swati story

ನವದೆಹಲಿ(ಜು.24): ನಾಳೆ ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ರಾಮನಾಥ್ ಕೋವಿಂದ್, ಸರಳತೆಯಲ್ಲಿ ದೇಶಕ್ಕೇ ಆದರ್ಶಪ್ರಾಯರಾಗಿದ್ದಾರೆ. ಅವರಂತೆಯೇ ಅವರ ಪುತ್ರಿ ಕೂಡ ಸರಳತೆಯುತ್ತಿದ್ದಾರೆ. ತಂದೆ ಎಷ್ಟೇ ಉನ್ನತ ಹುದ್ದೆ ಏರಿದರೂ, ತಂದೆಯ ಹುದ್ದೆಯ ಅಮಲಿನಲ್ಲಿ ತೇಲದೆ, ಸಾಮಾನ್ಯ ಮಹಿಳೆಯಂತೆ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರ ಪುತ್ರಿ ಸ್ವಾತಿ,ಏರ್ ಇಂಡಿಯಾ ಸಂಸ್ಥೆಯಲ್ಲಿ ಗಗನ ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದಾರೆ. ಆಸ್ಟ್ರೇಲಿಯಾ, ಯೂರೋಪ್, ಅಮೆರಿಕಾ ದೇಶಗಳಿಗೆ ಬೋಯಿಂಗ್ 777, 787 ವಿಮಾನಗಳಲ್ಲಿ ಸ್ವಾತಿ ಏರ್ ಹೋಸ್ಟೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆಂದೂ ತಾನು ರಾಮ್ ನಾಥ್ ಕೋವಿಂದ್ ರವರ ಪುತ್ರಿಯೆಂದು ಯಾರಿಗೂ ತಿಳಿಸಿರಲಿಲ್ಲ. ಸಾಮಾನ್ಯ ಉದ್ಯೋಗಿಯಂತೆ ವರ್ತಿಸುತ್ತಿದ್ದಾರೆ ಹೊರತು, ತನ್ನನ್ನು ತಾನು ಹೊಗಳಿಕೊಳ್ಳುತ್ತಿರಲಿಲ್ಲ. ಹಾಗಾಗಿ ಆಕೆಯ ಸಹೋದ್ಯೋಗಿಗಳು ಕೂಡ ಸ್ವಾತಿ ಗುಣವನ್ನು ಕಂಡು ಅಚ್ಚರಿಗೊಳ್ಳುವ ಜೊತೆಗೆ, ಮೆಚ್ಚೆಕೊಂಡಿದ್ದಾರೆ. ಸ್ವಾತಿ ನಡತೆಯನ್ನು ಕಂಡು ಹೆಮ್ಮೆಪಡುತ್ತಾರೆ.

Follow Us:
Download App:
  • android
  • ios