ಪೆರು ರಾಜಧಾನಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಮೆರಿಕದಲ್ಲಿ ಉದ್ಯೋಗವಕಾಶದ ಕೊರತೆ ಉಂಟಾದಾಗ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜಾಗತಿಕ ಆರ್ಥಿಕತೆಯ ಲಾಭಾಂಶ ವಿಶ್ವಸಮುದಾಯದೊಂದಿಗೆ ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಲಿಮಾ,ಪೆರು (ನ.21): 2008ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬರಾಕ್ ಒಬಾಮ ಸತತ 8 ವರ್ಷಗಳಿಂದ ಅಮೆರಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಭಾನುವಾರ ಅಧಿಕೃತವಾಗಿ ವಿಶ್ವಸಮುದಾಯದ ವೇದಿಕೆಗೆ ಗುಡ್ ಬೈ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಪೆರು ದೇಶದಲ್ಲಿ ಅಂತಿಮ ವಿದೇಶ ಪ್ರವಾಸ ಪೂರ್ಣಗೊಳಿಸಿರುವ ಒಬಾಮ ವಿಶ್ವ ವೇದಿಕೆಗೆ ಅಂತಿಮವಾಗಿ ವಿದಾಯ ಹೇಳಿದ್ದಾರೆ. ಇದೇ ವೇಳೆ ಕಳೆದ 8 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಜೀವನದಲ್ಲಿ ನಡೆದ ಕೆಲ ಮಹತ್ವದ ಅಂಶ ಹಂಚಿಕೊಂಡಿದ್ದಾರೆ.
ಪೆರು ರಾಜಧಾನಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಮೆರಿಕದಲ್ಲಿ ಉದ್ಯೋಗವಕಾಶದ ಕೊರತೆ ಉಂಟಾದಾಗ ಕಠಿಣ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಜಾಗತಿಕ ಆರ್ಥಿಕತೆಯ ಲಾಭಾಂಶ ವಿಶ್ವಸಮುದಾಯದೊಂದಿಗೆ ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡಿ, ಅವರು ಹಾಗೂ ನನ್ನ ನಡುವೆ ಅನೇಕ ಭಿನ್ನಾಭಿಪ್ರಾಯಗಳಿವೆ ಅದರ ವಿರೋಧದ ನಡುವೆ ಸಹ ಏಷ್ಯಾ-ಫೆಸಿಫಿಕ್ ಒಪ್ಪಂದ ಜೀವಂತವಾಗಿದೆ ಎಂದರು.