ವರಂಗಲ್‌ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ 1984ರಲ್ಲಿ ಬಿ.ಟೆಕ್, ಮದ್ರಾಸ್ ಐಐಟಿಯಿಂದ 1986ರಲ್ಲಿ ಎಂ.ಟೆಕ್, 1989ರಲ್ಲಿ ಅದೇ ಸಂಸ್ಥೆಯಿಂದ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.
ನವದೆಹಲಿ(ಜ.07): ಕರ್ನಾಟಕದ ಧಾರವಾಡದಲ್ಲಿ ಆರಂಭವಾಗಿರುವ ಐಐಟಿಗೆ ಪ್ರೊ.ಶೇಶು ಪಸುಮಾರ್ತಿ ಅವರನ್ನು ನೇಮಕ ಮಾಡಲಾಗಿದೆ. ಅವರ ಅಧಿಕಾರದ ಅವಧಿ ಐದು ವರ್ಷಗಳಾಗಿರಲಿವೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹೊಣೆಯನ್ನು ಅವರು ಹೊಂದಲಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದ ಆಯ್ಕೆ ಮತ್ತು ಶೋಧನಾ ಸಮಿತಿ ಮಾಡಿದ ಆಯ್ಕೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಶೇಷು ಪಸುಮಾರ್ತಿ ಅವರು ಸದ್ಯ ಐಐಟಿಯ ಬಾಂಬೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದಾರೆ. ವರಂಗಲ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ 1984ರಲ್ಲಿ ಬಿ.ಟೆಕ್, ಮದ್ರಾಸ್ ಐಐಟಿಯಿಂದ 1986ರಲ್ಲಿ ಎಂ.ಟೆಕ್, 1989ರಲ್ಲಿ ಅದೇ ಸಂಸ್ಥೆಯಿಂದ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ತಿರುಪತಿ, ಪಾಲಕ್ಕಾಡ್, ಭಿಲೈ-ದುರ್ಗ್, ಗೋವಾದಲ್ಲಿರುವ ಐಐಟಿಗಳಿಗೂ ನಿರ್ದೇಶಕರನ್ನು ನೇಮಿಸಲಾಗಿದೆ.
