ಪರಿಶಿಷ್ಟಪಂಗಡಗಳಿಗೆ ಇರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ಸಿಗಲೆಂದು 1999ರ ಕರ್ನಾಟಕ ಸಾರ್ವಜನಿಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ವಿಧೇಯಕ ಮಂಡಿಸಿತ್ತು. ಉಭಯ ಸದನಗಳಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಸಣ್ಣ ಮೊತ್ತದ ಸರ್ಕಾರಿ ಸಿವಿಲ್‌ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಪ್ರಾತಿನಿಧ್ಯ ಕಲ್ಪಿಸುವ (ಮೀಸಲು) ರಾಜ್ಯ ಸರ್ಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅನುಮೋದಿಸಿದ್ದಾರೆ.
ಬೆಂಗಳೂರು(ಜೂ.26): ಸರ್ಕಾರ ಕಲ್ಪಿಸಲಿರುವ ಈ ಮೀಸಲು ಸೌಲಭ್ಯ ಕೇವಲ 50 ಲಕ್ಷ ಮೊತ್ತದ ಕಾಮಗಾರಿಗಳಿಗೆ ಮಾತ್ರ. ಈ ಮೊತ್ತದ ಕಾಮಗಾರಿಗಳ ಪೈಕಿ ಶೇ.24.10ರಷ್ಟುಕೆಲಸಗಳನ್ನು ಪರಿಶಿಷ್ಟಜಾತಿ, ಪಂಗಡಗಳಿಗೆ ಮೀಸಲಿಡಬೇಕಾಗುತ್ತದೆ. ಅಂದರೆ ಶೇ.24.10ರಷ್ಟುಕಾಮಗಾರಿಗಳಿಗೆ ದಲಿತ ಸಮುದಾಯವೇ ಟೆಂಡರ್ ಹಾಕಬೇಕಾಗುತ್ತದೆ. ಇದರಲ್ಲಿ ಶೇ.17.15ರಷ್ಟುಕಾಮಗಾರಿಗಳನ್ನು ಪರಿಶಿಷ್ಟಜಾತಿಗಳಿಗೇ ಮೀಸಲಿಡಬೇಕು. ಶೇ.6.95ರಷ್ಟುಕಾಮಗಾರಿಗಳನ್ನು ಪರಿಶಿಷ್ಟಪಂಗಡಗಳಿಗೆ ಇರಿಸಬೇಕಾಗುತ್ತದೆ.
ಇದಕ್ಕೆ ಅವಕಾಶ ಸಿಗಲೆಂದು 1999ರ ಕರ್ನಾಟಕ ಸಾರ್ವಜನಿಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರ ವಿಧೇಯಕ ಮಂಡಿಸಿತ್ತು. ಉಭಯ ಸದನಗಳಲ್ಲಿ ಒಪ್ಪಿಗೆಯೂ ಸಿಕ್ಕಿತ್ತು. ಸಣ್ಣ ಮೊತ್ತದ ಸರ್ಕಾರಿ ಸಿವಿಲ್ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಪ್ರಾತಿನಿಧ್ಯ ಕಲ್ಪಿಸುವ (ಮೀಸಲು) ರಾಜ್ಯ ಸರ್ಕಾರದ ವಿಧೇಯಕವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನುಮೋದಿಸಿದ್ದಾರೆ.
ಸರ್ಕಾರ ಕೈಗೊಳ್ಳುವ .50 ಲಕ್ಷ ಮೌಲ್ಯದ ಒಳಗಿನ ಕಾಮಗಾರಿಗಳಲ್ಲಿ ಪರಿಶಿಷ್ಟಜಾತಿ, ಪಂಗಡಗಳ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಿಕೊಡಲು ಸರ್ಕಾರ ರೂಪಿಸಿದ್ದ ವಿಧೇಯಕವನ್ನು ರಾಜ್ಯಪಾಲರ ವಿ.ಆರ್.ವಾಲ ತಿರಸ್ಕರಿಸಿದ್ದರು. ಸರ್ಕಾರ ಎರಡನೇ ಬಾರಿ ಕಳುಹಿಸಿದಾಗ ರಾಜ್ಯಪಾಲರು ರಾಷ್ಟ್ರಪತಿ ಅವರ ಒಪ್ಪಿಗೆಗೆ ಕಳುಹಿಸಿದ್ದರು. ಈಗ ರಾಷ್ಟ್ರಪತಿಯವರು ಈ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.
