ರಾಷ್ಟ್ರಪತಿ ರಾಮನಾಥ್ ಕೋವಿಂದ ಬಿಹಾರ, ತಮಿಳುನಾಡು, ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶಗಳಿಗೆ ರಾಜ್ಯಪಾಲರನ್ನು ನೇಮಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್’ಗೂ ಲೆಫ್ಟಿನೆಂಟ್ ಗವರ್ನರ್’ಗಳನ್ನು ನೇಮಕ ಮಾಡಲಾಗಿದೆ.
ನವದೆಹಲಿ (ಸೆ.30): ರಾಷ್ಟ್ರಪತಿ ರಾಮನಾಥ್ ಕೋವಿಂದ ಬಿಹಾರ, ತಮಿಳುನಾಡು, ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶಗಳಿಗೆ ರಾಜ್ಯಪಾಲರನ್ನು ನೇಮಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್’ಗೂ ಲೆಫ್ಟಿನೆಂಟ್ ಗವರ್ನರ್’ಗಳನ್ನು ನೇಮಕ ಮಾಡಲಾಗಿದೆ.
ಬನ್ವಾರಿಲಾಲ್ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಇವರು ತಮಿಳುನಾಡಿನ ಜೊತೆಗೆ ಮಹಾರಾಷ್ಟ್ರದ ಹೆಚ್ಚುವರಿ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಿಗೆ ಪೂರ್ಣಾವಧಿ ರಾಜ್ಯಪಾಲರನ್ನು ನೇಮಕ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಬ್ರಿಗೇಡಿಯರ್ ಡಾ. ಬಿ ಡಿ ಮಿಶ್ರಾ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಸತ್ಯಪಾಲ್ ಮಲಿಕ್ ಬಿಹಾರದ ರಾಜ್ಯಪಾಲರಾಗಿ ನೇಮಕವಾಗಿದ್ದು, ಜಗದೀಶ್ ಮುಖಿ ಅಸ್ಸಾಂ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಮೇಘಾಲಯದ ರಾಜ್ಉಪಾಲರಾಗಿ ಗಂಗಾ ಪ್ರಸಾದ್ ನೇಮಕವಾಗಿದ್ದಾರೆ.
ಅಂಡಮಾನ್ ನಿಕೋಬಾರ್’ಗೆ ದೇವೇಂದ್ರ ಕುಮಾರ್ ಜೋಷಿ ನೇಮಕವಾಗಿದ್ದಾರೆ.
