ನವದೆಹಲಿ(ಆ.09): ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸರ್ಕಾರದ ಯುಎಪಿಎ ಮಸೂದೆಗೆ ಅಂಕಿತ ಹಾಕಿದ್ದಾರೆ.   

ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಮಸೂದೆ ಇದೀಗ ಕಾನೂನಾಗಿ ಜಾರಿಗೆ ಬರಲಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019ಕ್ಕೆ ರಾಷ್ಟ್ರಪತಿ ಕೋವೆಂದ್ ಒಪ್ಪಿಗೆ ಸೂಚಿಸಿದ್ದು,  ಸಂಶಯಾಸ್ಪದ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ನಂತರ ಅವರ ಮೇಲೆ ಪ್ರಯಾಣ ನಿಷೇಧ ಹೇರಿಕೆ ಸೇರಿದಂತೆ ಹಲವು ಕ್ರಮ ಜೈಗೊಳ್ಳಲು ಈ ಕಾನೂನಿನಡಿ ಅವಕಾಶವಿದೆ.

ಲಷ್ಕರ್-ಎ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಈ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲ್ಪಡಲಿದ್ದಾರೆ.