ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಭಾರತೀಯ ಪಿಎಸ್'ಎಲ್'ವಿ-ಸಿ37 ವಾಹಕದ ಮೂಲಕ ಬೆಳಿಗ್ಗೆ 9.28 ಗಂಟೆ ಸಮಯದಲ್ಲಿ ಗಂಟೆಗೆ 27 ಸಾವಿರ ಕಿ.ಮೀ ವೇಗದಲ್ಲಿ 4 ದೇಶೀಯ ಹಾಗೂ 101 ವಿದೇಶಿ ಉಪಗ್ರಹವನ್ನು ನಭಗೆ ಸೇರಿಸಲಾಗಿದೆ.
ನವದೆಹಲಿ (ಫೆ.15): ಒಂದು ಉಡಾವಣಾ ವಾಹಕದ ಮೂಲಕ ಏಕ ಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದರ ಮೋದಿ ಅಭಿನಂದಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಭಾರತೀಯ ಪಿಎಸ್'ಎಲ್'ವಿ-ಸಿ37 ವಾಹಕದ ಮೂಲಕ ಬೆಳಿಗ್ಗೆ 9.28 ಗಂಟೆ ಸಮಯದಲ್ಲಿ ಗಂಟೆಗೆ 27 ಸಾವಿರ ಕಿ.ಮೀ ವೇಗದಲ್ಲಿ 4 ದೇಶೀಯ ಹಾಗೂ 101 ವಿದೇಶಿ ಉಪಗ್ರಹವನ್ನು ನಭಗೆ ಸೇರಿಸಲಾಗಿದೆ.
ಇಷ್ಟು ಸಂಖ್ಯೆ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಇದೇ ಮೊದಲಾಗಿದ್ದು,ಅಮೆರಿಕ, ರಷ್ಯಾ ಸೇರಿದಂತೆ ಯಾವ ದೇಶವು ಈ ಸಾಧನೆ ಮಾಡಿರಲಿಲ್ಲ.
ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.