ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಪ್ರೇಮಕುಮಾರಿ ಯತ್ನ!

Premkumari Suicide attempt at Ramdas's House
Highlights

ರಾಮದಾಸ್ ಮನೆ ಮುಂದೆ ಆತ್ಮಹತ್ಯೆಗೆ ಪ್ರೇಮಾ ಯತ್ನ

ವೇಲ್​ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನ

ಮನೆ ಮುಂದೆ ನೆಲಕ್ಕುರುಳಿ ಗೋಳಾಡಿದ ಪ್ರೇಮಕುಮಾರಿ

ಚುನಾವಣೆ ಸಂದರ್ಭ ನೀಡಿದ್ದ ಮಾತು ತಪ್ಪಿದ ರಾಮದಾಸ್​?

ಪೊಲೀಸರ ಮನವೊಲಿಕೆಗೆ ಬಗ್ಗದ ಪ್ರೇಮಕುಮಾರಿ

ವಿದ್ಯಾರಣ್ಯಪುರಂ ಪೊಲೀಸರ ವಶದಲ್ಲಿರುವ ಪ್ರೇಮಕುಮಾರಿ 

ಮೈಸೂರು(ಜು.21): ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಅವರ ಮನೆ ಮುಂದೆ ಇಂದು ಹೈಡ್ರಾಮಾ ನಡೆದಿದೆ.  ಶಾಸಕ ಎಸ್​.ಎ. ರಾಮದಾಸ್​ ಮನೆ ಮುಂದೆ ಈವತ್ತು ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನ ತಡೆಯಲು ಹೋದಾಗ ರಾಮದಾಸ್ ಮನೆ ಮುಂದೆ ನೆಲಕ್ಕುರುಳಿ ಗೋಳಾಡಿದ ಪ್ರೇಮಕುಮಾರಿ, ರಾಮದಾಸ್​ ನಂಬಿಕೆ ದ್ರೋಹ ಮಾಡುತ್ತಿದ್ದಾರೆ ಅಂತಾ ಗೋಳಾಡಿದ್ದಾರೆ.

ನಾನು ಈವತ್ತು ಯಾವ ಕಾರಣಕ್ಕೂ ಬದುಕುವುದಿಲ್ಲ, ನನ್ನನ್ನು ಸಾಯಲು ಬಿಡಿ ಅಂತಾ ಪೊಲೀಸರ ಮುಂದೆ ಅಂಗಲಾಚಿದ್ದಾರೆ. ನಾಲ್ಕು ದಿನಗಳ ಹಿಂದೆ ಪ್ರೇಮಕುಮಾರಿ ತಾಯಿ ಲೀಲಾವತಿ ಮೇಲೆ ರಾಮದಾಸ್​ ಬೆಂಬಲಿಗರು ಹಲ್ಲೆ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕೆ.ಆರ್​. ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರೇಮಕುಮಾರಿ ಸಿದ್ಧತೆ ನಡೆಸಿದ್ದರು. 

ಆಗ ಸುವರ್ಣಮ್ಮ ಎಂ ಮಧ್ಯವರ್ತಿ ಮೂಲಕ ಪ್ರೇಮಕುಮಾರಿಯನ್ನು ಸಂಪರ್ಕಿಸಿದ್ದ ರಾಮದಾಸ್​, ಚುನಾವಣೆ ಮುಗಿದ ಮೇಲೆ ಸಮಾಜದ ಎದುರು ನಿನ್ನನ್ನು ಪತ್ನಿಯನ್ನಾಗಿ ಸ್ವೀಕರಿಸುತ್ತೇನೆಂದು ವಾಗ್ದಾನ ಮಾಡಿದ್ದರೆಂಬುದು ಪ್ರೇಮಕುಮಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನಡೆದ ಮಾತುಕತೆಯ ಆಡಿಯೋವನ್ನು ಕೂಡ ಅವರು ರಿಲೀಸ್ ಮಾಡಿದ್ದರು. 

ಈವತ್ತು ವೇಲ್​​ನಿಂದ ಕುತ್ತಿಗೆ ಬಿಗಿದುಕೊಳ್ಳಲು ಹೋದ ಅವರನ್ನು ಪೊಲೀಸರ ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೆ ಪ್ರೇಮಕುಮಾರಿ ಒಪ್ಪುತ್ತಿಲ್ಲ. ಬಿಡುಗಡೆ ಮಾಡಿದರೆ ಮತ್ತೆ ಅವರ ನಿವಾಸದ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ.

loader