ಕೈ, ಕಾಲು ಕಟ್ಟಿ ಗರ್ಭಿಣಿ ಅತ್ಯಾಚಾರವೆಸಗಿದ ಕಾಮುಕರು

First Published 21, Jan 2018, 12:42 PM IST
Pregnant Woman Out To Relieve Herself Tied And Gang Raped In Uttar Pradesh
Highlights

ಹೊರಗಡೆ ತೆರಳಿದ್ದ ಗರ್ಭಿಣಿ ಕೈ, ಕಾಲು ಕಟ್ಟಿದ ಕಾಮುಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಿಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬದಾನ್: ಅತ್ಯಂತ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಗರ್ಭಿಣಿ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರಿಕಿದ ಕಾಮುಕರು ಆಕೆ ಮೇಲೆ ಸಾಮೂಹಿಕಅತ್ಯಾಚಾರವೆಸಗಿದ್ದಾರೆ.

ಮನೆಯಿಂದ ಹೊರ ಹೋದ ಮಹಿಳೆ ಎಷ್ಟೊತ್ತಾದರೂ ಬಾರದಿದ್ದಕ್ಕೆ ಆತಂಕಗೊಂಡ ಮನೆಯವರು ಶೋಧಿಸಿದಾಗ, ಸಮೀಪದ ಕಾಡಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆ ಸಿಕ್ಕಿದ್ದಾಳೆ.

ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಹಿಳೆಯ ಹೇಳಿಕೆ ಪಡೆದ ನಂತರ ಮುಂದಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
 

loader