ಮದುವೆಗೂ ಮುನ್ನ ಪ್ರೇಯಸಿ ಗರ್ಭಿಣಿಯಾದಳು. ಇದರಿಂದ ಆಕೆಯನ್ನು ಗರ್ಭಪಾತಕ್ಕೆ ಕರೆದೊಯ್ದ ಪ್ರಿಯಕರ ಈ ವೇಳೆ ಮೃತಳಾದ ಪ್ರೇಯಸಿಯ ದೇಹವನ್ನು ಕಾಡಿನಲ್ಲಿ ಎಸೆದು ಹೋಗಿ ಅಮಾನವೀಯತೆ ಮೆರೆದಿದ್ದಾನೆ. 

ಲಕ್ನೋ : ಗರ್ಭಪಾತದ ವೇಳೆ ಸಾವಿಗೀಡಾದ ಪ್ರೇಯಸಿಯ ದೇಹವನ್ನು ಕಾಡಿನಲ್ಲಿ ಪ್ರಿಯಕರ ಎಸೆದು ಹೋದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೆಪ್ಟೆಂಬರ್ ತಿಂಗಳ 18ನೇ ತಾರೀಕು ಯುವತಿಯ ಮೃತದೇಹದಲ್ಲಿ ಕಾಡಿನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಿಯಕರನ ಕೃತ್ಯ ಬೆಳಕಿಗೆ ಬಂದಿದೆ. ಇದಾದ ಬಳಿಕ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. 

ಗರ್ಭಪಾತ ಮಾಡಿಸುವ ವೇಳೆ ಆಕೆ ಮೃತಪಟ್ಟಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಪ್ರಿಯಕರ ಒಪ್ಪಿಕೊಂಡಿದ್ದಾಗಿ ಎಸ್ ಎಸ್ ಪಿ ಸುಧೀರ್ ಕುಮಾರ್ ಹೆಳಿದ್ದಾರೆ. ಈ ಸಂಬಂಧ ಇದೀಗ ಐಪಿಸಿ ಸೆಕ್ಷನ್ 304 ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.