ನವದೆಹಲಿ : ದಿಲ್ಲಿಯಲ್ಲಿ ಗರ್ಭಿಣಿಯೋರ್ವಳು ಗಂಡನಿಗೆ ಮುತ್ತನ್ನಿಡುವ ವೇಳೆ ಆತನ ನಾಲಿಗೆಯನ್ನೇ ಕಚ್ಚಿದ ಘಟನೆಯೊಂದು ಬೆಳಕಿಗೆ ಬಂದಿದೆ. 

ಶನಿವಾರ ರಾತ್ರಿ ದಿಲ್ಲಿಯ ರನ್ ಹೋಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

8 ತಿಂಗಳ ಗರ್ಭಿಣಿಯಾಗಿರುವ ಆಕೆ ತನ್ನ 22 ವರ್ಷದ ಗಂಡನೊಂದಿಗೆ ಖುಷಿಯಿಂದ ಇರಲಿಲ್ಲ. ಆತ ನೋಡಲು ಸುಂದರವಾಗಿಲ್ಲ ಎಂದು ಆತನೊಂದಿಗೆ ಅಸಮಾಧಾನವನ್ನು ಹೊಂದಿದ್ದಳು. 

ಇದೇ ಕಾರಣಕ್ಕಾಗಿ ಗಂಡ ಹೆಂಡತಿ ನಡುವೆ ಯಾವಾಗಲೂ ಕೂಡ ಗಲಾಟೆ ನಡೆಯುತ್ತಿದ್ದು, ಶನಿವಾರ ಮುತ್ತನ್ನಿಡುವ ನಾಟಕವಾಡಿ ಆತನ ನಾಲಿಗೆಯನ್ನು ಕಚ್ಚಿದ್ದಾಳೆ ಎಂದು ಪೊಲೀಸರಿಗೆ ಪತಿಯ ಕುಟುಂಬಸ್ಥರು ದೂರು ನೀಡಿದ್ದಾರೆ. 

ಸದ್ಯ ಆತನನ್ನು ದಿಲ್ಲಿಯ ಸಫ್ದಾಗರ್ ಆಸ್ಪತ್ರೆಗೆ ದಾಖಲು ಮಾಡಿ ಸರ್ಜರಿ ನಡೆಸಲಾಗಿದೆ. ಅಲ್ಲದೇ ಆಕೆಯ ವಿರುದ್ಧ ದೂರು ದಾಖಲು ಮಾಡಲಾಗಿದೆ.